





ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಪುತ್ತೂರು ಬಜೆತ್ತೂರು ನಿವಾಸಿ ರೇಷ್ಮಾ ಎಂಬವರ ಗಂಡ ಕಳೆದ ಹಲವಾರು ದಿನಗಳ ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ವತಿಯಿಂದ ಆರ್ಥಿಕ ಧನಸಹಾಯ ವಿತರಿಸಿದರು.


ಈ ಸಂದರ್ಭದಲ್ಲಿ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಗೌರವಾಧ್ಯಕ್ಷ ಚಂದಪ್ಪ ಮೂಲ್ಯ ಅಧ್ಯಕ್ಷ ಮಹೇಂದ್ರವರ್ಮ ,ನಿಯೋಜಿತ ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ, ನಿಯೋಜಿತ ಕಾರ್ಯದರ್ಶಿ ಪ್ರೇಮ್ ರಾಜ್ ಅರ್ಲಪದವು,ಬಿಜೆಪಿ ಗ್ರಾಮಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ,ಕೋಶಾಧಿಕಾರಿ ಗಣೇಶ್ಚಂದ್ರ ಭಟ್ ಮಕರಂದ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತಾ ನಿಯೋಜಿತ ಕೋಶಾಧಿಕಾರಿ ರೂಪೇಶ್ ಟಿ ನಾಯ್ಕ್, ಪುತ್ತೂರು ಉಪಸ್ಥಿತರಿದ್ದರು.















