ಗಡಿಪ್ಪಿಲದಲ್ಲಿ ’ಕಲ್ಪವೃಕ್ಷ ಟ್ರೇಡರ್ಸ್’ ಶುಭಾರಂಭ

0

ಪುತ್ತೂರು: ತೆಂಗಿನ ಕಾಯಿ ಹಾಗೂ ಗುಜಿರಿ ವಸ್ತುಗಳ ಖರೀದಿ ಕೇಂದ್ರ ’ಕಲ್ಪವೃಕ್ಷ ಟ್ರೇಡರ್ಸ ಗಡಿಪ್ಪಿಲ ಅನುಗ್ರಹ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.


ಕೆ.ಪಿ ಉಮ್ಮರ್ ನರಿಮೊಗರು ದುವಾ ನೆರವೇರಿಸಿದರು. ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ, ಸರ್ವೆ ಕಲ್ಪಣೆ ಪ್ರೌಢ ಶಾಲೆಯ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಸರ್ವೆ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು ತಾ.ಪಂ ಕೆಡಿಪಿ ಮಾಜಿ ಸದಸ್ಯ ಅಬ್ದುಲ್ ಕುಂಞಿ ಪಟ್ಟೆ, ಅನುಗ್ರಹ ಕಾಂಪ್ಲೆಕ್ಸ್‌ನ ಮಾಲಕ ಸುರೇಶ್, ಅನಿವಾಸಿ ಉದ್ಯಮಿ ಅಬ್ದುಲ್ ನಾಸಿರ್ ರೆಂಜಲಾಡಿ, ನಿವೃತ್ತ ಮುಖ್ಯಗುರು ಮಹಾಬಲ ರೈ ಬೊಟ್ಯಾಡಿ, ಪ್ರಮುಖರಾದ ರಾಧಾಕೃಷ್ಣ ರೈ ರೆಂಜಲಾಡಿ, ಕರೀಂ ಸೋಂಪಾಡಿ, ಸುಂದರ ಬಲ್ಯಾಯ ನೆಕ್ಕಿಲು, ಗಣೇಶ್ ಕೋಡಿಬೈಲ್, ಅಶೋಕ್ ನಾಯ್ಕ ಸೊರಕೆ, ಅನಂತ್‌ ಭಂಡಾರಿ ಬೊಟ್ಯಾಡಿ. ಚಂದ್ರಶೇಖರ ಭಟ್ ಎಲಿಯ, ಎಸ್.ಎಂ ಶರೀಫ್ ಸರ್ವೆ, ಚಂದ್ರ ಭಟ್ ನಡುಬೈಲು, ಗಣೇಶ್ ನೇರೋಳ್ತಡ್ಕ, ಆಸಿಫ್ ರೆಂಜಲಾಡಿ, ರತ್ನಾಕರ ನಾಯಕ್ ಉದ್ದಮಜಲು, ಹಾರಿಸ್ ಕೂಡುರಸ್ತೆ, ಚಂದ್ರಹಾಸ ರೈ ಬೊಟ್ಯಾಡಿ, ಮಹಮ್ಮದ್ ಪೆರುವಾಯಿ, ರಹೀಂ ಸೇರಾಜೆ, ಅರುಣ್ ಕಲ್ಲಮ, ಬೊಗ್ಗ ಮೊಗೇರ, ರಾಧಾಕೃಷ್ಣ ಬಡಕ್ಕೋಡಿ, ಉಮೇಶ್ ಎಸ್.ಡಿ, ಸಂತೋಷ್ ಕಲ್ಪಣೆ, ರಮೇಶ್ ವೀರಮಂಗಲ, ಜಯಪ್ರಕಾಶ್ ರೈ ರೆಂಜಲಾಡಿ, ಜೀವನ್ ಕಡ್ಯ, ರತ್ನಾಕರ ಬಾವಿಕಟ್ಟೆ, ಪ್ರಸಾದ್ ಬಾವಿಕಟ್ಟೆ, ಪ್ರಮೋದ್ ಬಾವಿಕಟ್ಟೆ, ಮನೀಷ್, ಭರತ್, ಹರೀಶ್, ಪುನೀತ್, ಪದ್ಮನಾಭ, ದೀಕ್ಷಿತ್ ಮತ್ತಿತರ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು.


ಅತಿಥಿಗಳನ್ನು ಸ್ವಾಗತಿಸಿದ ಕಲ್ಪವೃಕ್ಷ ಟ್ರೇಡರ್ಸ್‌ನ ಮಾಲಕ ಕೆ.ಎಂ ಹನೀಫ್ ರೆಂಜಲಾಡಿ ಮಾತನಾಡಿ, ಕಲ್ಪವೃಕ್ಷ ಟ್ರೇಡರ್ಸ್’ನಲ್ಲಿ ಕೊಬ್ಬರಿ, ಬಾಲ್ ಕೊಬ್ಬರಿ, ಗೆರಟೆ, ಎಳನೀರು, ಕೊಕ್ಕೊ, ಬಾಳೆಗೊನೆ ಹಾಗೂ ಇನ್ನಿತರ ಕಾಡುತ್ಪತ್ತಿಗಳನ್ನು ಮತ್ತು ಗುಜಿರಿ ವಸ್ತುಗಳನ್ನು ಖರೀದಿ ಮಾಡಲಾಗುವುದು ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು. ಅಶ್ರಫ್ ಕಡ್ಯ, ಯೂಸುಫ್ ರೆಂಜಲಾಡಿ, ಸಾಹಿಲ್ ರೆಂಜಲಾಡಿ, ಅನ್ಸೀಫ್ ಸಹಕರಿಸಿದರು.

LEAVE A REPLY

Please enter your comment!
Please enter your name here