ಪುತ್ತೂರು: ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆಲಂಕಾರಿನಲ್ಲಿ ಆ.17ರಂದು ಸಂಜೆ ನಡೆದಿದೆ.
ಪೆರಾಬೆ ಕುಂಟ್ಯಾನ ನಿವಾಸಿ ಸೋಮಶೇಖರ್ ಗಾಯಗೊಂಡಿದ್ದು ಪುತ್ತೂರಿನ ಹಿತ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮಶೇಖರ ಅವರು ಬೈಕ್ ನಲ್ಲಿ ಆಲಂಕಾರು ಪೇಟೆಗೆ ಬಂದವರು ಸುರುಳಿ ಕಡೆಗೆ ಹೋಗುವ ರಸ್ತೆ ಬಳಿ ತಲುಪಿದಾಗ ಕಡಬ ಕಡೆಯಿಂದ ಬಂದ ಕಾರು ರಸ್ತೆಯ ಬಲ ಬದಿಗೆ ಬಂದು ಬೈಕ್‌ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಸೋಮಶೇಖರ ಅವರು ಬೈಕ್ ಸಮೇತ ರಸ್ತೆಗೆ ಬಿದಿದ್ದು ಅವರ ಬಲ ಕಾಲು ಮತ್ತು ತಲೆಗೆ ಗಾಯವಾಗಿದೆ. ಎರಡೂ ವಾಹನಗಳು ಜಖಂಗೊಂಡಿವೆ.
ಗಾಯಾಳು ಸೋಮಶೇಖರ ಅವರನ್ನು ಕಾರಿನಲ್ಲಿದ್ದ ನಿಖಿಲ್ ಅವರು ಚಿಕಿತ್ಸೆಗಾಗಿ ಪುತ್ತೂರು ಹಿತ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.