ಮರ್ದಾಳ: ವಾಹ್ ಕಿಡ್ಸ್ ಪ್ಲೇ ಸ್ಕೂಲ್‌ನಲ್ಲಿ ಕೃಷ್ಣ ವೇಷ ಮತ್ತು ಭರತನಾಟ್ಯ ಸ್ಪರ್ಧೆ

0

ಕಡಬ: ಮರ್ದಾಳ ಪಾಲೆತ್ತಡ್ಕ ಸೆ.5ರಂದು ಉದ್ಘಾಟನೆಯಾಗಲಿರುವ ವಾಹ್ ಪ್ಲೇ ಸ್ಕೂಲ್‌ನ ಅಂಗವಾಗಿ ಆ.17ರಂದು ಗಣಹೋಮ, ಕೃಷ್ಣ ವೇಷ ಹಾಗೂ ಭರತನಾಟ್ಯ ಸ್ಪರ್ಧೆಗಳು ನಡೆಯಿತು.


ಗಣಹೋಮವನ್ನು ಶ್ರೀ ಕೂತೂರು ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕ ವೆಂಕಟ್ರಮಣ ಭಟ್ ನೆರವೇರಿಸಿದರು. ಕಾರ್ಯಕ್ರಮವು ಸಮಾಜ ಸೇವಕ, ಸಹಕಾರ ಧುರೀಣ, ಧಾರ್ಮಿಕ ಮುಖಂಡ ಹಾಗೂ ಪ್ರತಿಷ್ಠಿತ ಕೈಕುರೆ ಕುಟುಂಬದ ಹಿರಿಯರಾದ ಕುಶಾಲಪ್ಪ ಗೌಡ ಕೈಕುರೆ ಮತ್ತು ಅವರ ಪತ್ನಿ ಪ್ರೇಮಲತಾ ಕೆ. ಕೈಕುರೆ ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ನಡೆಯಿತು.


ದೀಪ ಪ್ರಜ್ವಲನೆ ಹಾಗೂ ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯಿಂದ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯ ಹಾಗೂ ಕಲಾವಿದ ಯಶವಂತ್ ರೈ ಮತ್ತು ಸಂತ ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪೂಜಶ್ರಿ ರೈ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

LEAVE A REPLY

Please enter your comment!
Please enter your name here