34 ನೆಕ್ಕಿಲಾಡಿಯಲ್ಲಿ ಆನೆಗಳು ಪ್ರತ್ಯಕ್ಷ

0

ಉಪ್ಪಿನಂಗಡಿ: ಇಲ್ಲಿನ 34ನೇ ನೆಕ್ಕಿಲಾಡಿ ಗ್ರಾಮದ ದರ್ಬೆ ನಿಗರ್ ಗುಂಡಿ ಎಂಬಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಪರಿಸರದ ನಿವಾಸಿಗರನ್ನು ಭೀತಿಗೊಳಪಡಿಸಿದೆ.
ನೆಕ್ಕಿಲಾಡಿ ಪರಿಸರದ ಕೆಲ ಮಂದಿ ಎಂದಿನಂತೆ ಮೀನು ಹಿಡಿಯಲೆಂದು ನದಿಯತ್ತ ಸಾಗಿದಾಗ ನದಿ ಪರಿಸರದಲ್ಲಿ ಆನೆಗಳ ಹೆಜ್ಜೆ ಗುರುತು ಕಂಡು ಬಂದಿತು. ಸಂದೇಹ ಮೂಡಿ ಪರಿಶೀಲಿಸಿದಾಗ ನದಿಯಲ್ಲೇ ಒಂದು ಮರಿ ಆನೆ ಮತ್ತು ತಾಯಿ ಆನೆ ಜೊತೆಗೂಡಿ ಇರುವುದು ಕಂಡಿದೆ.

ಸಾಯಂಕಾಲದ ವರೆಗೂ ಎರಡೂ ಆನೆಗಳು ನದಿಯಲ್ಲಿ ನೀರಾಟವಾಡುತ್ತಾ ವಿಹರಿಸುತ್ತಿತ್ತು. ಬಳಿಕ ಆನೆಯು ದರ್ಬೆ ಪರಿಸರದತ್ತ ಬಂದಿತು. ಬಳಿಕ ಅರಣ್ಯಾಧಿಕಾರಿಗಳ ತಂಡವು ಸ್ಥಳಕ್ಕೆ ಬಂದಿದ್ದು, ರಾತ್ರಿಯೂ ಆನೆಯನ್ನು ಬಂದ ದಾರಿಯಲ್ಲೇ ಹಿಂದಕ್ಕೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಆನೆಯು ರಾತ್ರಿಯ ಹೊತ್ತು ಕಾಡಿನೊಳಗೆ ಸೇರಿಕೊಂಡಿದೆ. ಇದು ನರಿಮೊಗರು ಕಡೆಯಿಂದ ಕಟಾರವಾಗಿ ದರ್ಬೆ ಕಡೆಗೆ ಬಂದಿರಬಹುದೆಂದು ಶಂಕಿಸಲಾಗಿದೆ.

ಕುಮಾರಧಾರ ನದಿಯ ಒಂದು ಪಾರ್ಶ್ವದಲ್ಲಿ ನೆಕ್ಕಿಲಾಡಿ ಗ್ರಾಮವಿದ್ದು, ಮತ್ತೊಂದು ಕಡೆಯಲ್ಲಿ ಹಿರೇಬಂಡಾಡಿ ಗ್ರಾಮವಿದೆ. ಆನೆಗಳು ಯಾವ ಪಾರ್ಶ್ವಕ್ಕೆ ಕಾಲಿರಿಸುತ್ತದೆ ಎನ್ನುವ ಭೀತಿಯಲ್ಲೇ ಪರಿಸರದ ಜನ ದಿನ ಕಳೆಯುವಂತಾಗಿದೆ.ಪುತ್ತೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಕುಮಾರ್ ನೇತೃತ್ವದ ಆನೆ ಓಡಿಸುವ ತಂಡದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾಂತರಾಜ್, ಅರಣ್ಯಾಧಿಕಾರಿಗಳಾದ ಉಲ್ಲಾಸ, ಕಾಜಿಸಾಬ್, ಸುಧೀರ್ ಹೆಗ್ಡೆ, ಸತೀಶ್ ಡಿಸೋಜ, ದೇವಿಪ್ರಸಾದ್, ರಾಜೇಶ್ ಇದ್ದರು.

LEAVE A REPLY

Please enter your comment!
Please enter your name here