ಪುತ್ತೂರು: ಅಕ್ಷಯ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ, ನಿಯೋ ಇನ್ನೋವೇಶನ್ & ಸ್ಕಿಲ್ಸ್ ಮತ್ತು ಐಕ್ಯುಎಸಿ ಸಂಯುಕ್ತ ಆಶ್ರಯದಲ್ಲಿ ಆ.22ರಂದು ಎಐ ಮತ್ತು ಸೈಬರ್ ಸೆಕ್ಯೂರಿಟಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಮುಖ್ಯ ಅತಿಥಿಯಾಗಿಆಗಮಿಸಿದ ಡಾ. ಮೀರಾ ಎ. ರಾವ್, DTM, ಡಿವಿಷನ್ ಡೈರೆಕ್ಟರ್, ಡಿವಿಷನ್ F, ಡಿಸ್ಟ್ರಿಕ್ 121 ಇವರು ವಿದ್ಯಾರ್ಥಿಗಳನ್ನು ಅಭಿನಂದಿಸಿ “ನಿರಂತರ ಕಲಿಕೆಯ ಮೂಲಕ ನಿಮ್ಮ ಕೌಶಲ್ಯಗಳನ್ನು ವೃದ್ಧಿಪಡಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧನೆಗಳನ್ನು ತಲುಪಲು ತಂಡದಲ್ಲಿ ಸಹಕಾರ ಮತ್ತು ಉತ್ತಮ ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸಬೇಕು. ನಿಮ್ಮ ಪರಿಶ್ರಮವು ನಿಮ್ಮ ಭವಿಷ್ಯಕ್ಕೆ ಮಾರ್ಗದರ್ಶಕವಾಗಿರಲಿ” ಎಂದು ಪ್ರೇರೇಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಯಂತ ನಡುಬೈಲ್, ಅಧ್ಯಕ್ಷರು, ಅಕ್ಷಯ ಸಮೂಹ ಸಂಸ್ಥೆ, ಇವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಈ ಕಾರ್ಯಕ್ರಮವು ನಿಮ್ಮ ಪರಿಶ್ರಮ ಮತ್ತು ಕೌಶಲ್ಯವನ್ನು ಗೌರವಿಸುವ ವಿಶೇಷ ಸಂದರ್ಭವಾಗಿದೆ. ತಂತ್ರಜ್ಞಾನ ಮತ್ತು ಕಲಿಕೆಯ ಹೊಸ ಹಾದಿಗಳನ್ನು ಅನ್ವೇಷಿಸಿ, ನಿಮ್ಮ ಕೌಶಲ್ಯಗಳನ್ನು ಸದಾ ವೃದ್ಧಿಪಡಿಸಿ; ಆತ್ಮವಿಶ್ವಾಸ, ಶ್ರಮ ಮತ್ತು ಸಾಧನೆಗಳು ನಿಮ್ಮ ಭವಿಷ್ಯವನ್ನು ಬೆಳಗಿಸುತ್ತವೆ ಎಂದು ಹೇಳಿದರು.

ಇನ್ನೋರ್ವಮುಖ್ಯ ಅತಿಥಿಯಾಗಿ ಆಗಮಿಸಿದ ವಸುಮತಿ ಶೆಟ್ಟಿ, ಚೀಫ್ ಸ್ಟ್ರಾಟಜೀ ಆಫೀಸರ್, ನಿಯೋ ಇನೋವೇಶನ್ & ಸ್ಕಿಲ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪರಿಶ್ರಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ವಿದ್ಯಾರ್ಥಿಗಳಿಗೆ ಉದ್ಯಮಿಕ ಜ್ಞಾನವನ್ನು ಅನುಭವದೊಂದಿಗೆ ಸಂಯೋಜಿಸುವ ಮಹತ್ವವನ್ನು ತಿಳಿಸಿದರು ಮತ್ತು ನೈಜ ಕ್ಷೇತ್ರದಲ್ಲಿ ಹೊಸ ಉಪಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸಿದರು. ಶ್ರಮ ಮತ್ತು ಪರಿಶ್ರಮವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪ್ರಮುಖ ಅಂಶ ಎಂದು ವಿವರಿಸಿದರು.
ನಂತರ ಅರ್ಪಿತ್ ಟಿ.ಎ. ಆಡಳಿತಾಧಿಕಾರಿ, ಇವರು ವಿದ್ಯಾರ್ಥಿಗಳ ಪರಿಶ್ರಮ ಮತ್ತು ಸಾಧನೆಗಳನ್ನು ಮೆಚ್ಚಿಕೊಂಡರು. ಅವರು ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯಗಳನ್ನು ಸದಾ ವೃದ್ಧಿಪಡಿಸಲು ಪ್ರೇರೇಪಿಸಿದರು. ಶ್ರಮ, ದೃಢ ನಿಶ್ಚಯ ಮತ್ತು ನೈಜ ಜೀವನದಲ್ಲಿ ಅನುಭವವು ಯಶಸ್ಸಿನ ಪ್ರಮುಖ ಅಂಶ ಎಂದು ಅವರು ತಿಳಿಸಿದರು.
ನಂತರ ತೃತೀಯ ಬಿಸಿಎ ವಿದ್ಯಾರ್ಥಿಗಳಿಗೆ ಸ್ಟ್ಯಾಟಿಸ್ಟಿಕ್ಸ್ ಫಾರ್ ಎಐ, ಪೈಥಾನ್ ಅಪ್ಲಿಕೇಶನ್ ಮತ್ತು ಸೈಬರ್ ಸೆಕ್ಯುರಿಟಿ ಮತ್ತು ದ್ವಿತೀಯ ಬಿಸಿಎ ವಿದ್ಯಾರ್ಥಿಗಳು ಸ್ಟ್ಯಾಟಿಸ್ಟಿಕ್ಸ್ ಫಾರ್ ಎಐ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಸಾಧನೆಗಾಗಿ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಾಗಿ ಸಂಪತ್ ಕೆ ಪಕ್ಕಳ ಪ್ರಾಂಶುಪಾಲರು, ಡಾ. ಭಾರತಿ ಶೆಟ್ಟಿ, ಗೈನಕಾಲಜಿಸ್ಟ್ & ಏರಿಯಾ F03 ಡೈರೆಕ್ಟರ್ ಡಿಸ್ಟ್ರಿಕ್ಟ್ 121, ರಶ್ಮಿ ಕೆ, ಐಕ್ಯುಎಸಿ ಸಂಯೋಜಕರು ಮತ್ತು ದೀಕ್ಷಾ ರೈ ಮುಖ್ಯಸ್ಥರು, ಕಂಪ್ಯೂಟರ್ ಸೈನ್ಸ್ ವಿಭಾಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕು. ಲಾವಣ್ಯ, ದ್ವಿತೀಯ ಬಿಸಿಎ ಪ್ರಾರ್ಥಿಸಿ, ಕು. ಸೌಜನ್ಯ ಹೆಚ್, ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ ಸ್ವಾಗತಿಸಿದರು. ಪ್ರತಿತಾ ಡಿ, ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ, ಇವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ಕಾರ್ತಿಕ್ ಪಿ ರೈ, ತೃತೀಯ ಬಿಸಿಎ ವಂದಿಸಿ ಕು. ಅಫೀಜ ನಿರೂಪಿಸಿದರು.