ಪುತ್ತೂರು: ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ,ಇದರ ವತಿಯಿಂದ ಶ್ರೀರಾಮ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಲ್ಲಡ್ಕ ಇಲ್ಲಿ ನಡೆದ ಜಿಲ್ಲಾಮಟ್ಟದ ಗಣಿತ – ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
ಬಾಲವರ್ಗದ ಕ್ಲೇ ಮಾಡೆಲಿಂಗ್ ದ್ವಿಜನ್- ಪ್ರಥಮ, ಕಿಶೋರ ವರ್ಗದ ಕ್ಲೇ ಮಾಡೆಲಿಂಗ್- ಯಶ್ವಿತ್ ಸಾಲ್ಯಾನ್ – ದ್ವಿತೀಯ, ಆಶು ಭಾಷಣ – ಮೌಲ್ಯ – ದ್ವಿತೀಯ, ಗಣಿತ ಮಾದರಿ – ಅನುಷಾ – ದ್ವಿತೀಯ, ವಿಜ್ಞಾನ ಮಾದರಿ – ಅಭಿನವ್ – ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.