ಜಯರಾಮ ನಾಯ್ಕ್ ಕೊಡಂಗೆರವರ ಉತ್ತರ ಕ್ರಿಯೆ, ಶ್ರದ್ದಾಂಜಲಿ ಸಭೆ

0

ನಮ್ಮದು 50 ವರ್ಷಗಳ ಒಡನಾಟ- ನಂಬಿಕೆಗೆ ಇನ್ನೋಂದು ಹೆಸರೇ ಜಯರಾಮ:- ಡಾ.ಪ್ರಸಾದ್ ಭಂಡಾರಿ

ಪುತ್ತೂರು: ಪುತ್ತೂರಿನ ಪ್ರಖ್ಯಾತ ಜೀಪು ಮತ್ತು ಅಂಬಾಸಿಡರ್ ಕಾರು ಮೆಕ್ಯಾನಿಕ್ ತೆಂಕಿಲ ಕೊಡಂಗೆ ನಿವಾಸಿ ಜಯರಾಮ ನಾಯ್ಕ್ ರವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮಗಳು ಹಾಗೂ ಶ್ರದ್ದಾಂಜಲಿ ಸಭೆ ಸೆ.೧೫ ರಂದು ಮಧ್ಯಾಹ್ನ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ನಡೆಯಿತು.


ಸೆ.೫ ರಂದು ಅಗಲಿದ ಜಯರಾಮ ನಾಯ್ಕ್ ರವರ ಕುರಿತು ಮಾತನಾಡಿದ ನಿವೃತ್ತ ಉಪ ತಹಾಶೀಲ್ದಾರ್ ಪಾದೆ ಕಂರ್ಬಡ್ಕ ಚಂದ್ರಶೇಖರ ನಾಯ್ಕ್ ಉತ್ತಮ ಕೃಷಿಕ,ದೈವಭಕ್ತ, ತುಂಬು ಕುಟುಂಬವನ್ನು ಯಶಸ್ವಿಯಾಗಿ ಮುನ್ನಡೆಸಿದ ಸರಳ ಜೀವಿ. ಆತ್ಮೀಯ ಒಡನಾಟದಿಂದ ಎಲ್ಲರಿಗೂ ಚಿರಪರಿಚಿತರಾಗಿ ಬದುಕಿದವರು. ಇವರ ದಿವ್ಯಾತ್ಮಕ್ಕೆ ಭಗವಂತನ ಸನ್ನಿದಿಯಲ್ಲಿ ಚಿರಶಾಂತಿ ದೊರೆಯಲಿ. ‘ಜಾತಸ್ಯ ಮರಣಂ ಧ್ರುವಂ’ ಹುಟ್ಟಿದ ಪ್ರತಿಯೊಬ್ಬನಿಗೂ ಮರಣ ನಿಶ್ಚಿತ ಎಂದರು.


ನುಡಿನಮನ ಸಲ್ಲಿಸಿದ ಹಿರಿಯ ವೈದ್ಯ ದಿ.ಜಯರಾಮ್ ನಾಯ್ಕ್ ರವರ ಆತ್ಮೀಯರೂ ಆದ ಡಾ.ಪ್ರಸಾದ್ ಭಂಡಾರಿ ಮಾತನಾಡಿ, ಜಯರಾಮ್ ನಾಯ್ಕ್ ಮತ್ತು ನನ್ನ ಒಡನಾಟ ಇಂದು ನಿನ್ನೆಯದಲ್ಲಿ ಸುಮಾರು ೫೦ ವರುಷಗಳದ್ದು ಬದುಕಿನುದ್ದಕ್ಕು ಸತ್ಯ, ಧರ್ಮ, ನ್ಯಾಯ, ನಿಷ್ಠೆಯಿಂದ ಜೀವನ ನಡೆಸಿದ ಇವರು ಮಹಾಲಿಂಗೇಶ್ವರನ ಪರಮ ಭಕ್ತ ಅವನ ಸನ್ನಿಧಿಗೆ ಹೋಗಿಯೇ ಅಂದಿನ ಕಾಯಕ ಶುರು. ಯಾವುದೇ ಸದ್ಗತಿ ಕಾರ್ಯಕ್ರಮ ಮಾಡದಿದ್ದರು ಇವರಿಗೆ ಸ್ವರ್ಗ ಪ್ರಾಪ್ತಿ ಯಾಗುತ್ತದೆ ಅಂತಹ ನಿಷ್ಖಳಂಕ ವ್ಯಕ್ತಿತ್ವದವರು,ನಂಬಿಕೆಗೆ ಇನ್ನೋಂದು ಹೆಸರೇ ಜಯರಾಮ. ಕಣ್ಣು ಮುಚ್ಚಿ ನಂಬ ಬಹುದಾದ ವ್ಯಕ್ತಿತ್ವ ಹೊಂದಿದ ಇವರ ಅಗಲುವಿಕೆಯ ಅನಿರೀಕ್ಷಿತವಾದುದು. ಇವರ ಮನೆಯವರಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದರು.


ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಜಯರಾಮ ನಾಯ್ಕ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಡಾ.ಸುಬ್ರಾಯ ಭಟ್,ಮಾಜಿ ಶಾಸಕ ಸಂಜೀವ ಮಟಂದೂರು,ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ,ಸುಮನ ಮುರಳಿ ಮೋಹನ್,ರಾಖೇಶ್ ರೈ ಕೆಡೆಂಜಿ,ಚಿಕ್ಕಪ್ಪ ನಾಯ್ಕ್,ನಾರಾಯಣ ನಾಯ್ಕ್, ಅಬಕಾರಿ d c ಶಿವ ಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


ಮೃತರ ಪತ್ನಿ ವೇದಾವತಿ, ಪುತ್ರರಾದ ರೂಪೇಶ್ ನಾಯ್ಕ್ ,ನಿತೇಶ್ ನಾಯ್ಕ್ ,ಸಚಿನ್ ನಾಕ್ ,ಪುತ್ರಿ ಶಮ್ಮಿಕಾ,ಅಳಿಯ ಮನೋಹರ್ ನಾಯ್ಕ್,ಸೊಸೆ ಜ್ಯೋತಿ ರೂಪೇಶ್, ಮೊಮ್ಮಕ್ಕಳಾದ ಸಮೃದ್ದಿ,ಸಮೃದ್ದ್,ಸಾನ್ವಿ ಸಹೋದರಿಯರಾದ ಯಶೋಧಾ,ಸೀತಾ, ಕೊಡಂಗೆ ಬಾಲಕೃಷ್ಣ ನಾಯ್ಕ್ ,ಬಾಲಕೃಷ್ಣ ನಾಯ್ಕ್ ಕಟ್ಟತ್ತಾರು, ಸಂಜೀವ ನಾಯ್ಕ್ ತೆಂಕಿಲ,ಶಶಿಧರ್ ನಾಯ್ಕ್ ತೆಂಕಿಲ, ಪುರುಷೋತ್ತಮ ನಾಕ್ ಪಾಂಗ್ಲಾಯಿ,ಉಮೇಶ್ ನಾಯ್ಕ್ ಕಾಸರಗೋಡು ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here