ಪುತ್ತೂರು ಜೇಸಿಐಯಿಂದ ಅದ್ದೂರಿಯಾಗಿ ಮೇಳೈಸಿದ ಜೆಸಿಐ ಸಪ್ತಾಹ
ಪುತ್ತೂರು: ಪ್ರತಿಷ್ಠಿತ ಅಂತರಾಷ್ಟ್ರೀಯ ತರಬೇತಿ ಸಂಸ್ಥೆ ಜೆಸಿಐನ ಪುತ್ತೂರು ಘಟಕದ 2025ನೇ ಸಾಲಿನ ಜೆಸಿಐ ಸಪ್ತಾಹವು ಭಿನ್ನ-ವಿಭಿನ್ನ ಕಾರ್ಯಕ್ರಮಗಳೊಂದಿಗೆ ಸೆ.9 ರಂದು ಪ್ರಾರಂಭವಾಯಿತು. ಸೆ.15 ರಂದು ತೆರೆ ಕಂಡಿತು. ಸೆ.9ರ ಬೆಳಗ್ಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಜೆಸಿ ಸಪ್ತಾಹ ಧ್ವಜ ಅವರೋಹಣದೊಂದಿಗೆ ಸಮಾಪ್ತಿಗೊಂಡಿತು.

ಸೆ. 9ರಂದು ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯ ಸಭಾಂಗಣದಲ್ಲಿ ಪೂರ್ವಾಹ್ನ 10ಕ್ಕೆ ಜೆಸಿ ದ್ವಜಾರೋಹಣ ಹಾಗೂ ಸಪ್ತಾಹದ ಉದ್ಘಾಟನೆ ನಡೆಯಿತು. ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿ ಆಧ್ಯಕ್ಷ ಚಿಲ್ಮೆತ್ತಾರು ಜಗಜೀವನ್ ದಾಸ್ ರೈ ಇವರು ನೆರವೇರಿಸಿ, ಹಾರೈಸಿದರು. ಸಪ್ತಾಹವನ್ನು ಜೇಸಿಐ ನ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿ ಮುರಳಿ ಶ್ಯಾಮ್ ಉದ್ಘಾಟಿಸಿದರು. ಪೂರ್ವ ಅಧ್ಯಕ್ಷರುಗಳಾದ ಜೆಸಿ ವಿಶ್ವಪ್ರಸಾದ್ ಸೇಡಿಯಾಪು ಮತ್ತು ಜೆಸಿ ಕೃಷ್ಣಪ್ರಸಾದ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಳಿಕ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಜೆಸಿಐ ಸಪ್ತಾಹದ ಎರಡನೇ ದಿನದಂದು ಜೆಸಿಯೇತರ ಯುವ ಸಮುದಾಯಕ್ಕೆ ಜೆಸಿ ಸೇರಲು ಮಾಹಿತಿ ಕಾರ್ಯಭಾರವನ್ನು ಪುತ್ತೂರಿನ ವೆಬ್ ಪೀಪಲ್ ಸಂಸ್ಥೆಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಪೂರ್ವ ಅಧ್ಯಕ್ಷ ಜೆಸಿ ಶರತ್ ರೈ ಉದ್ಘಾಟಿಸಿದರು. ಜೆಸಿಐ ತರಬೇತಿ ವಿಭಾಗದ ಉಪಾಧ್ಯಕ್ಷ ಜೆಸಿ ಶರತ್ ಶ್ರೀನಿವಾಸ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾಹಿತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವೆಬ್ ಪೀಪಲ್ ಸಂಸ್ಥೆ ಸಿಇಓ ಆದಿತ್ಯ ಕಲ್ಲೂರಾಯ ವೇದಿಕೆಯಲ್ಲಿ ಇದ್ದರು. ಮಧ್ಯಾಹ್ನ 2 ರಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು ಜಿಡೆಕಲ್ಲು ಇಲ್ಲಿನ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಗಾರ ನಡೆಯಿತು. ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಅವರು ಕಾರ್ಯಗಾರವನ್ನು ಉದ್ಘಾಟಿಸಿ , ಹಾರೈಸಿದರು. ವಿದ್ಯಾಮಾತಾದ ತರಬೇತುದಾರ ಚಂದ್ರಕಾಂತ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಪೂರ್ವ ಅಧ್ಯಕ್ಷರಾದ ಜೆಸಿ ಶ್ರೀಕಾಂತ್ ಕೊಳ್ಳತಾಯ ಉಪಸ್ಥಿತರಿದ್ದರು.

ಜೇಸಿ ಸಪ್ತಾಹದ ಮೂರನೇ ಬೆಳಿಗ್ಗೆ ಗಂಟೆ 10ಕ್ಕೆ ಅಖಿಲ ಭಾರತೀಯ ಮೊಬೈಲ್ ಮಾರಾಟಗಾರರ ಸಂಘ ಇದರ ಪುತ್ತೂರು ಘಟಕದ ಸಹಯೋಗದೊಂದಿಗೆ ಆರೋಗ್ಯ ತಪಾಸಣಾ ಶಿಬಿರವು ವಿದ್ಯಾಮಾತಾ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪೂರ್ವ ಅಧ್ಯಕ್ಷರಾದ ಜೆಎಫ್ ಪಿ ಸೂರಪ್ಪ ಗೌಡರವರು ಉದ್ಘಾಟಿಸಿದರು. ವೇದಿಕೆಯಲ್ಲಿ ಪೂರ್ವ ಅಧ್ಯಕ್ಷರಾದ ಜೆಸಿ ಶಶಿರಾಜ್ ರೈ ಹಾಜರಿದ್ದರು. ಬಳಿಕ 3:30ಕ್ಕೆ ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಇಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ನಡೆಯಿತು. ಈ ಕ್ರೀಡಾಕೂಟವನ್ನು ಪೂರ್ವ ಅಧ್ಯಕ್ಷರಾದ ಜೆಸಿ ವಿಜಯ ಮೊಳೆಯಾರ್ ರವರು ಉದ್ಘಾಟಿಸಿದರು. ಕ್ರೀಡಾಕೂಟದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಪ್ರಾಂಶುಪಾಲ ಗೋಪಾಲ ಗೌಡ, ದೈಹಿಕ ಶಿಕ್ಷಣ ನಿರ್ದೇಶಕರಾದ ವಿಜೇತ್ ಕುಮಾರ್ ಹಾಗೂ ಕೊಂಬೆಟ್ಟು ಶ್ರೀರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಅವರು ಉಪಸ್ಥಿತರಿದ್ದರು.
ಜೆಸಿ ಸಪ್ತಾಹದ ನಾಲ್ಕನೇ ದಿನ ಬೆಳಿಗ್ಗೆ ಗಂಟೆ 8 ಕ್ಕೆ ಸಚ್ಚಿದಾನಂದ ಸಭಾಭವನ ದರ್ಬೆಯಲ್ಲಿ ವ್ಯವಹಾರ ನೆಟ್ ವರ್ಕಿಂಗ್ ಸಭೆ ನಡೆಯಿತು. ಜೆಸಿ ವಲಯ 15ರ ವಲಯ ಉಪಾಧ್ಯಕ್ಷ ಜೆಸಿ ಸುಹಾಸ್ ಮರಿಕೆ ಉಪಸ್ಥಿತರಿದ್ದರು. ಗಂಟೆ 11ಕ್ಕೆ ನಾಮಫಲಕ ದೊಂದಿಗೆ ವ್ಯವಹಾರ ದಿನ ಕಾರ್ಯಕ್ರಮವನ್ನು ಲಷ್ ಫ್ಯಾಷನ್ ಇನ್ಸೈಡ್ ಜಿ.ಎಲ್ ಒನ್ ಮಾಲ್ ಇಲ್ಲಿ ಪೂರ್ವ ಅಧ್ಯಕ್ಷರಾದ ಜೆಸಿ ಸ್ವಾತಿ ಜೆ ರೈ ಉದ್ಘಾಟಿಸಿದರು. ಜೆಸಿ ಮಾಲಿನಿ ಕಶ್ಯಪರವರು ಉಪಸ್ಥಿತರಿದ್ದರು.
ಜೆಸಿ ಸಪ್ತಾಹದ ಐದನೇ ದಿನ ಬೆಳಿಗ್ಗೆ ಗಂಟೆ 10ಕ್ಕೆ ಕರ್ತವ್ಯಕ್ಕಾಗಿ ಧ್ವನಿ – ಮಾನವ ಕರ್ತವ್ಯ ಮಾಹಿತಿ ಕಾರ್ಯಗಾರ ಸುದಾನ ಪದವಿ ಪೂರ್ವ ಕಾಲೇಜು ಇಲ್ಲಿ ನಡೆಯಿತು.
ಕಾರ್ಯಗಾರವನ್ನು ಪೂರ್ವ ಅಧ್ಯಕ್ಷರಾದ ಜೆಸಿ ಪಶುಪತಿ ಶರ್ಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಪೂರ್ವ ಅಧ್ಯಕ್ಷರಾದ ಜೆಸಿ ಜಗನ್ನಾಥ ರೈಯವರು ಭಾಗವಹಿಸಿ ಕಾರ್ಯಗಾರ ನಡೆಸಿಕೊಟ್ಟರು. ಸುದಾನ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಜೆಸಿ ಸುಪ್ರೀತ್ ಕೆ.ಸಿ. ಹಾಗೂ ಪೂರ್ವ ಅಧ್ಯಕ್ಷ ಜೆಸಿ ದಾಮೋದರ ಪಾಟಾಳಿ ಉಪಸ್ಥಿತರಿದ್ದರು.
ಜೆಸಿ ಸಪ್ತಾಹದ ಆರನೇ ದಿನ ಆಮಂತ್ರಣ ದಿನ – ಬನ್ನಿ ಜೆಸಿಐ ಸೇರಿ ನಡಿಗೆ ಜಾಥಾವು ಬೆಳಿಗ್ಗೆ 9ಕ್ಕೆ ವಿದ್ಯಾಮಾತಾ ಅಕಾಡೆಮಿಯಲ್ಲಿ ಉದ್ಘಾಟನೆಯಾಯಿತು. ಪೂರ್ವಧ್ಯಕ್ಷ ಜೆಸಿ ಪುರುಷೋತ್ತಮ ಶೆಟ್ಟಿಯವರು ಜಾಥಾ ಉದ್ಘಾಟಿಸಿದರು. ಪೂರ್ವ ಅಧ್ಯಕ್ಷರಾದ ಜೆಸಿ ಗೌತಮ್ ರೈ, ಜೆಸಿ ಉಮೇಶ್ ಶೆಟ್ಟಿ ಬಿ., ಜೆಸಿ ವಸಂತ ಜಾಲಾಡಿ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಜೆಸಿ ಸಪ್ತಾಹದ ಕೊನೆಯ ದಿನ ಸೆಪ್ಟೆಂಬರ್ 15ರಂದು ಸಮಾರೋಪ ಸಮಾರಂಭವು ಪುದ್ವಾರ್ ಎನ್ನುವ ತುಳುನಾಡಿನ ಹೊಸ ಅಕ್ಕಿ ಊಟವನ್ನು ಅಪ್ಪಟ ಸಾಂಪ್ರದಾಯಿಕ ಖಾದ್ಯಗಳ ಭೋಜನದ ಜೊತೆಗೆ ಸವಿಯಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳಿಂದ ಮತ್ತು ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅ್ಯಂಡ್ ಕಲ್ಚರ್ (ರಿ) ಇಲ್ಲಿನ ವಿದುಷಿ ನಯನ ವಿ. ರೈ ಮತ್ತು ಸ್ವಸ್ತಿಕ ಆರ್. ಶೆಟ್ಟಿ ಇವರ ನಿರ್ದೇಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ ವೈಭವ ನಡೆಯಿತು. ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಇಲ್ಲಿನ ಸಂಚಾಲಕರು ಮಣಿಲಾ ಕನ್ಸ್ಟ್ರಕ್ಷನ್ ಅಂಡ್ ಅಗ್ರೋ ಇದರ ಮಾಲಕರು, ಕೃಷಿಕರು ಆದ ಸಿ ಮಹಾದೇವಶಾಸ್ತ್ರಿ ಮಣಿಲಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರಾದ ಶ್ರೀರಾಮಕುಂಜೇಶ್ವರ ಪ್ರೌಢಶಾಲೆ ರಾಮಕುಂಜ ಇಲ್ಲಿಯ ಮುಖ್ಯ ಗುರುಗಳಾದ ಜೆಸಿ ಸತೀಶ್ ಭಟ್ ಬಿಳಿನೆಲೆ ಇವರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು. ಪೂರ್ವಧ್ಯಕ್ಷರಾದ ಜೆಸಿ ಸ್ವಾತಿ ಜಗನ್ನಾಥ ರೈ ಅವರಿಗೆ ಕಮಲ ಪತ್ರ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಹಾಗೂ ವಿಸ್ಮಯ ಇವೆಂಟ್ಸ್ ನ ಮಾಲಕರಾದ ಜೆಸಿ ಸಾಯಿರಾಮ್ ಬಾಳಿಲ ಇವರಿಗೆ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.