ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ಗಜಾನನ ಶಾಲಾ ವಿದ್ಯಾರ್ಥಿಗಳಿಗೆ 4 ಬೆಳ್ಳಿಯ ಪದಕ

0

ಈಶ್ವರಮಂಗಲ: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ, ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ಸದಸ್ಯ ಸಂಸ್ಥೆ ಇದರ ಆಶ್ರಯದಲ್ಲಿ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ ಖಾನಾಪುರ್ ಬೆಳಗಾಂ ಇಲ್ಲಿ ಸೆ.13ರಂದು ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಹನುಮಗಿರಿ ಇಲ್ಲಿಯ 10ನೇ ತರಗತಿ ವಿದ್ಯಾರ್ಥಿನಿ ಧರಣಿ ಕೆ.ಟಿ (ಪೆರ್ಲಂಪಾಡಿ ನಿವಾಸಿ ತಿರುಮಲೇಶ್ವರ ಕೆ ಮತ್ತೆ ಹೇಮಮಾಲಿನಿ ಹೆಚ್ ಇವರ ಪುತ್ರಿ), 9ನೇ ತರಗತಿ ವಿದ್ಯಾರ್ಥಿ ಕಾರ್ತಿಕ್ (ಪೆರ್ಲಂಪಾಡಿ ನಿವಾಸಿ ಗೋಪಾಲಕೃಷ್ಣ ಮತ್ತು ಸುಚಿತ್ರ ದಂಪತಿಗಳ ಪುತ್ರ) ಹಾಗೂ ಧನ್ವಿತ್ ಶೆಟ್ಟಿ (ಕರ್ನೂರು ನಿವಾಸಿ ದಯಾನಂದ ಶೆಟ್ಟಿ ಮತ್ತು ಸವಿತಾ ಬಿ ಇವರ ಪುತ್ರ), 8ನೇ ತರಗತಿ ವಿದ್ಯಾರ್ಥಿನಿ ಶನ್ಮಿತಾ (ಮೇನಾಲ ನಿವಾಸಿ ಎಂ ಜಯಂತ್ ರೈ ಮತ್ತು ಕೆ ಅನಿತ ದಂಪತಿಗಳ ಪುತ್ರಿ) ಭಾಗವಹಿಸಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ.

ಇವರಿಗೆ ಕರಾಟೆ ಶಿಕ್ಷಕರಾಗಿ ತರಬೇತಿಯನ್ನು ನೀಡಿದವರು ನಾರಾಯಣ ಆಚಾರ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಶಾಂತ್ ರೈ ಹಾಗೂ ಹರ್ಷಿತ್ ಕೆ ಇವರುಗಳು ಮಾರ್ಗದರ್ಶನವನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here