ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ ಜಿಲ್ಲೆ, ಮಂಗಳೂರು ಹಾಗೂ ಸರಕಾರಿ ಪ.ಪೂ ಕಾಲೇಜು ಉಪ್ಪಿನಂಗಡಿ ಇದರ ಜಂಟಿ ಆಶ್ರಯದಲ್ಲಿ ಸೆ.17ರಂದು ನಡೆದ ಪುತ್ತೂರು ತಾಲೂಕು ಮಟ್ಟದ ‘ಮ್ಯಾಟ್ ಕಬ್ಬಡಿ ಪಂದ್ಯಾಟ-2025- 26 ಪಂದ್ಯಾಟದಲ್ಲಿ ಸಂತ ಫಿಲೋಮಿನಾ ಪ. ಪೂ ಕಾಲೇಜಿನ ಬಾಲಕಿಯರ ವಿಭಾಗವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ದ್ವಿತೀಯ ಕಲಾ ವಿಭಾಗದ ಅಸ್ಥಿಕಾ ಹಾಗೂ ಪ್ರಥಮ ವಿಜ್ಞಾನ ವಿಭಾಗದ ಸುಪ್ರಿಯಾ ಇವರು ಸುಳ್ಯ ನೆಹರು ಮೆಮೋರಿಯಲ್ ಕಾಲೇಜುನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದು,ಬೆಸ್ಟ್ ರೈಡರ್ ಆಗಿ ಅಸ್ಥಿಕಾ ಹೊರಹೊಮ್ಮಿದ್ದಾರೆ. ಉಳಿದಂತೆ ಪಂದ್ಯಾಟದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಶ್ರೇಯಾ ಶ್ರೀ, ವರ್ಷಾ ಕೆ, ಪ್ರಥಮ ವಾಣಿಜ್ಯ ವಿಭಾಗದ ಮೋಕ್ಷಾ, ಶ್ರೀನಿಧಿ ಬಿಲ್ಲವ, ಪಯಸ್ವಿನಿ ಎ. ಪಿ, ಪ್ರಥಮ ವಿಜ್ಞಾನ ವಿಭಾಗದ ಹಶಿತಾ ಎನ್. ಆರ್, ಪ್ರತೀಕ್ಷಾ ಡಿ. ಯು, ಏಂಜೆಲ್. ಜೆ ಹಾಗೂ ಅಮಿಶಾ ಮೋಹನ್ ಭಾಗವಹಿಸಿದ್ದರು. ಇವರಿಗೆ ಮಹಮದ್ ಅಬೀಬ್ ತರಬೇತಿ ನೀಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕರಾದ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.