





ಪುತ್ತೂರು: ಮೂಲತ ಬಂಟ್ವಾಳ ತಾಲೂಕಿನ ಮಿತ್ತೂರು ನಿವಾಸಿ ಪ್ರಸ್ತುತ ಪುಣೆಯಲ್ಲಿ ನೆಲೆಸಿರುವ ಸುಶ್ಮೀತಾ ಅಭಿಷೇಕ್ ರವರಿಗೆ ಸಾವಿತ್ರ ಬಾಯಿಫುಲೆ Pune ವಿಶ್ವವಿದ್ಯಾಲಯ ಇಲ್ಲಿಂದ “ಎ ಕಾಂಪರೇಟಿವ್ ಸ್ಟಡಿ ಆನ್ ಇಂಪ್ಯಾಕ್ಟ್ ಆಫ್ ಫೈನಾನ್ಸಿಯಲ್ ಸ್ಮೀಮ್ಸ್ ಆಫ್ ಗವರ್ನ್ಮೆಂಟ್ ಆನ್ ಎಂಎಸ್ ಎಂಇಆಫ್ ಪುಣೆ ಡಿಸ್ಟ್ರಿಕ್ಟ್” ಮಂಡನೆಗೆ ಪದವಿ ಲಭಿಸಿದ್ದು, ಡಾ.ಕೋಮಲ್ ಸಿಂಗ್ ಮಾರ್ಗದರ್ಶನ ನೀಡಿರುತ್ತಾರೆ. ಪ್ರಸ್ತುತ ಪುಣೆಯ ಇಂದಿರಾ ಯುನಿವರ್ಸಿಟಿಯಲ್ಲಿ Faculty of Finance ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತಿ ಅಭಿಷೇಕ್ ದೇವಚರಣ್ ರಾವ್ ಎಮರ್ಸನ್ ಪ್ರೈ.ಲಿ ಸಂಸ್ಥೆಯಲ್ಲಿ ಕಮರ್ಷಿಯಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.



ಮೂಲತ ಮಿತ್ತೂರಿನ ವಿಶ್ವನಾಥ ಶಶಿಕಲಾ ಅಮೀನ್ ದಂಪತಿಗಳ ಪುತ್ರಿಯಾಗಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಮಿತ್ತೂರು ಸ.ಹಿ.ಪ್ರಾ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಕೊಂಬೆಟ್ಟಿನಲ್ಲಿ, ಬಳಿಕ ನೆಹರುನಗರ ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯ ಬಳಿಕ, ಕಲ್ಲಡ್ಕ ಶ್ರೀ ರಾಮ ಕಾಲೇಜಿನಲ್ಲಿ ಹಾಗೂ ಮಂಗಳೂರಿನ ಯೆನೆಪೋಯ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು.










