ರೂ.1,53.556.21 ನಿವ್ವಳ ಲೀ ಗೇ 74 ಪೈಸೆ ಬೋನಸ್ ಶೇಕಡ 10 ಡಿವಿಡೆಂಟ್
ಪುತ್ತೂರು: ಶಾಂತಿಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ಸೆ.16ರಂದು ಸಂಘದ ಆವರಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಪ್ರವೀಣ್ ಶೆಟ್ಟಿ ಮಾತನಾಡಿ ಸಂಘದಲ್ಲಿ 99118.78 ಲೀ.ಹಾಲು ಖರೀದಿ ಹಾಗೂ 5831.50 ಲೀ.ಸ್ಥಳೀಯವಾಗಿ ಹಾಲು ಮಾರಾಟ ಮಾಡಲಾಗಿದೆ. ಸಂಘವು ರೂ 3,53,479.36 ಹಾಲು ವ್ಯಾಪಾರ ಲಾಭ ರೂ 25,496.42 ಪಶು ಆಹಾರ ಮತ್ತು ಲವಣ ಮಿಶ್ರಣ ಲಾಭ ಪಡೆದು ಒಟ್ಟು 153,556.21 ರೂ ನಿವ್ವಳ ಲಾಭಗಳಿವೆ. ಸದಸ್ಯರಿಗೆ ಲೀ.ಗೇ 0.74 ಪೈಸೆ ಭೋನಸ್ 10 ಶೇ ಡಿವಿಡೆಂಟ್ ನೀಡಲಾಗುವುದು ಎಂದರು. ಎಲ್ಲಾ ಯೋಜನೆ ಸೌಲಭ್ಯಗಳನ್ನು ಬಳಸಿಕೊಂಡು ಹೈನುಗಾರಿಕೆಯನ್ನು ಹೆಚ್ಚಳ ಮಾಡಿ ಸಂಘದ ಅಭಿವೃದ್ಧಿಗೆ ಶ್ರಮಿಸಿ ಎಂದರು. ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀ ದೇವಿ ಮಾತನಾಡಿ, ಹಾಲು ಪೂರೈಕೆಯ ಮಾಹಿತಿ ನೀಡುವ ಆಪ್ ಅನ್ನು ಎಲ್ಲರು ಇನ್ಸ್ಟಾಲ್ ಮಾಡಿಸಿ ಮತ್ತು ಹೆಚ್ಚಾಗಿ ನಂದಿನಿ ಪಶು ಆಹಾರ ಬಳಕೆ ಮಾಡಿ ಒಕ್ಕೂಟದಿಂದ ಹೈನುಗಾರಿಕೆ ಸಿಗುವ ಸೌಲಭ್ಯವನ್ನು ತಿಳಿಸಿದರು. ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ತಂದು ಸಹಕರಿಸಿ ಎಂದರು.
ಸಂಘದ ಕಾರ್ಯದರ್ಶಿ ಯಶೋಧ ಎನ್ 2024 25ನೇ ಸಾಲಿನ ವಾರ್ಷಿಕ ವರದಿಯನ್ನು ಓದಿ ಮಂಜೂರುಗೊಳಿಸಿದರು. 2024 25ನೇ ಸಾಲಿನ ನಿವ್ವಳ ಲಾಭ ವಿಲೆವರಿ ಮತ್ತು ವಿತರಣೆಯನ್ನು ತಿಳಿಸಿದರು. 2025-25ನೇ ಸಾಲಿನ ಯೋಜನೆ, ಕಾರ್ಯಚಟುವಿಟಿಗೆ ಅಂದಾಜು ಆಯವ್ಯಯ ಮಂಡಿಸಿದರು. 2024 25ನೇ ಸಾಲಿನಲ್ಲಿ ಅತಿ ಹೆಚ್ಚು ಹಾಲು ಪೂರೈಸಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ದಿವ್ಯ ಪ್ರಥಮ ನೋಹಿತಾಕ್ಷಿ ಇವರಿಗೆ ದ್ವಿತೀಯ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
2024 25ನೇ ಸಾಲಿನಲ್ಲಿ 90 ದಿವಸ ಹಾಲು ಪೂರೈಕೆ ಮಾಡಿದ ಎಲ್ಲಾ ಸದಸ್ಯರಿಗೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಪಶು ಸಂಗೋಪನೆ ಇಲಾಖೆಯ ಪಶುಶಖಿ ಸೌಮ್ಯ ದಿನೇಶ್ ಮಾತನಾಡಿ, ಇಲಾಖೆಯಿಂದ ಸಿಗುವ ಅನುದಾನ ಹಾಗೂ ಉಚಿತವಾಗಿ ಗ್ರಾಮಕ್ಕೆ ಬಂದು ನೀಡಲಾಗುತ್ತಿರುವ ರಾಬಿಸ್ ಚುಚ್ಚುಮದ್ದಿನ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಭಾರತಿ ಓಲಾಡಿ, ಶಶಿಕಲಾ, ಸುಬ್ಬಲಕ್ಷ್ಮಿ, ಸುಮಂಗಲ, ಜಯಂತಿ, ಚಂದ್ರಾವತಿ, ದಿವ್ಯಾ ಜೆ, ಸುಚಿತ್ರ ರೂಪಲತಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಹಾಲು ಪರೀಕ್ಷಕಿ ತುಳಸಿ ಪ್ರಾರ್ಥಿಸಿ, ಸಂಘದ ಉಪಾಧ್ಯಕ್ಷೆ ಚಂಪಾವತಿ ಸ್ವಾಗತಿಸಿ, ಸಂಘದ ನಿರ್ದೇಶಕಿ ಭಾರತಿ ವಂದಿಸಿದರು. ಕಾರ್ಯಕ್ರಮದಲ್ಲಿ ಹರೀಶ್ ಗೌಡ ಕರ್ಬಡ್ಕ, ಪ್ರಸಾದ್ ಗೌಡ ಕಕ್ವೆ, ಸತೀಶ್ ಪೂಜಾರಿ ಪರಕಮೆ, ಶರತ್ ಕಕ್ವೆ, ಚೇತನ್ ಕುಮಾರ್ ಕೈಂದಾಡಿ ಸಹಕರಿಸಿದರು.