ಪುತ್ತೂರಿನ ಬಾಲ ಪ್ರತಿಭೆ ಸೋನಿಕಾ ಜನಾರ್ದನ್‌ಗೆ ಸಚಿವ ಮಹದೇವಪ್ಪರಿಂದ ಪ್ರಶಂಸೆ
ಪುತ್ತೂರು: ಮೈಸೂರಿನ ಯೂನಿವರ್ಸಿಟಿ ಆವರಣದಲ್ಲಿ ನಡೆದ ದಸರಾ ಯುವ ಸಂಭ್ರಮ ಕಾರ್ಯಕ್ರಮದಲ್ಲ್ಲಿ ಪುತ್ತೂರಿನ ಬಾಲ ಕಲಾವಿದೆ ಸೋನಿಕಾ ಜನಾರ್ಧನ್‌ರವರು ಡಾ. ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡಿರುವ ಡಾ. ಬಿ. ಆರ್ ಅಂಬೇಡ್ಕರ್ ರಚಿತ ಭಾರತೀಯ ಸಂವಿಧಾನದ ಪೀಠಿಕೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ನೆರೆದ ಯುವ ಸಮೂಹ ಹಾಗೂ ಗಣ್ಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇವರು ಈಗಾಗಲೆ ಹಲವಾರು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದು ದ. ಕ ಜಿಲ್ಲೆಯಿಂದ ಪ್ರಥಮ ಬಾರಿಗೆ ಮೈಸೂರು ದಸರಾ ಯುವ ಸಂಭ್ರಮ ಕಾರ್ಯಕ್ರಮ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜ್ಯ ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್. ಸಿ ಮಹದೇವಪ್ಪ ರವರು ಸೇರಿದಂತೆ ವಿವಿಧ ಗಣ್ಯರು ಬಾಲ ಪ್ರತಿಭೆ ಯನ್ನು ಪ್ರಶಂಸಿಸಿದ್ದಾರೆ. ಮೈಸೂರಿನ ಐಡಿಯಾಲ್ ಜಾವಾ ರೋಟರಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಸೋನಿಕಾ ಜನಾರ್ದನ್‌ರವರು ಮೈಸೂರಿನ ಐದನೇ ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಜನಾರ್ಧನ್ ಪುತ್ತೂರು ಮತ್ತು ಪ್ರಮೀಳಾ ಜನಾರ್ಧನ್‌ರವರ ಪತ್ರಿ ಯಾಗಿದ್ದಾರೆ. ಯುವ ದಸರಾ ಸಂಭ್ರಮವನ್ನು ಮೈಸೂರಿನ ಯುವ ವಕೀಲರುಗಳಾದ ಹೇಮಾ. ಹೆಚ್ ಮತ್ತು ಕಾತ್ಯಯಿನಿ ಕಾರ್ಯಕ್ರಮ ನಿರೂಪಿಸಿದ್ದರು.