ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವ ದಿನಗಳ ಕಾರ್ಯಕ್ರಮ
ಪುತ್ತೂರು: ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದಲ್ಲಿ ನವರಾತ್ರಿ ಉತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ.22 ರಿಂದ ಆರಂಭಗೊಂಡು ಸೆ.30 ರ ತನಕ ನಡೆಯಲಿದೆ.
ಸೆ.22 ರಂದು ದೀಪ ಪ್ರಗತಿಪರ ಕೃಷಿಕ ಕೊಡಂಕಿರಿ ಚಂದ್ರಹಾಸ ರೈಯವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾತ್ರಿ ಗಂಟೆ 7 ರಿಂದ ಭಜನಾ ಸೇವೆ ನಡೆಯಲಿದೆ ಬಳಿಕ ಸಾಂಸ್ಕೃತಿಕ ವೈಭವ ದೀಪವನ್ನು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ ದೇರ್ಲರವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಿದ್ದು ಶ್ರೀ ಕೃಷ್ಣ ಕಲಾಕೇಂದ್ರ ವೀರಮಂಗಲ ಇದರಿಂದ “ಭಕ್ತಿಪ್ರಧಾನ ನೃತ್ಯರೂಪಕ ಮಕರಜ್ಯೋತಿ” ಪ್ರದರ್ಶನಗೊಳ್ಳಲಿದೆ.
ಸೆ.23 ರಂದು ರಾತ್ರಿ 7 ರಿಂದ ಭಜನಾ ಸೇವೆ. ರಾತ್ರಿ 8.30ರಿಂದ “ನೃತ್ಯಾರ್ಪಣಂ” ವಿದುಷಿ ಕು| ಅಭಿಜ್ಞಾ ಮತ್ತು ಶಿಷ್ಯವೃಂದ ನಾಟ್ಯಾಭಿಯೋಗಿ ನೃತ್ಯಶಾಲೆ ತಿಂಗಳಾಡಿ ಇವರಿಂದ ನಡೆಯಲಿದೆ. ಸೆ.24 ರಾತ್ರಿ 7 ರಿಂದ ಭಜನಾ ಸೇವೆ.ರಾತ್ರಿ 8-30ರಿಂದ ‘ಸಾಂಸ್ಕೃತಿಕ ವೈಭವ’ ವಿದುಷಿ ರಶ್ಮಿ ದಿಲೀಪ ರೈ ಮತ್ತು ಶಿಷ್ಯವೃಂದ ಬೃಂದಾವನ ನಾಟ್ಯಶಾಲೆ ಸನ್ಯಾಸಿಗುಡ್ಡೆ ಇವರಿಂದ ನಡೆಯಲಿದೆ.
ಸೆ.25 ರಾತ್ರಿ 7 ರಿಂದ ಭಜನಾ ಸೇವೆ. ರಾತ್ರಿ 8.30 ರಿಂದ ‘ಯಕ್ಷಗಾನ ಬಯಲಾಟ’ ಅಭಿನವ ಕೇಸರಿ ಸಾರಥ್ಯದ ಅಭಿನವ ಯಕ್ಷ ಕಲಾ ಕೇಂದ್ರ ಮಾಡಾವು ಇದರಿಂದ. ಪ್ರಸಂಗ “ಲೀಲಾವಿನೋದಿ ಶ್ರೀ ಕೃಷ್ಣ” ಆಡಿ ತೋರಿಸಲಿದ್ದಾರೆ.ಸೆ.26 ರಾತ್ರಿ 7.೦೦ ರಿಂದ ಭಜನಾ ಸೇವೆ. ರಾತ್ರಿ 8.3೦ ರಿಂದ ‘ ಸಾಂಸ್ಕೃತಿಕ ವೈಭವ – ಕುಸಲ್ದ ಎಸಲ್’ ಜೈದೀಪ್ ಕೋರಂಗ ಇವರ ಸಾರಥ್ಯದಲ್ಲಿ ನಡೆಯಲಿದೆ.
ಸೆ.27 ರಾತ್ರಿ 7.೦೦ ರಿಂದ ಭಜನಾ ಸೇವೆ. ರಾತ್ರಿ 8-30ರಿಂದ ಯಕ್ಷಗಾನ ತಾಳಮದ್ದಳೆ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪ್ರಸಂಗ ‘ಊರ್ವಶಿ ಶಾಪ’ ಆಡಿ ತೋರಿಸಲಿದ್ದಾರೆ. ಸೆ.28 ರಾತ್ರಿ 7ರಿಂದ ಭಜನಾ ಸೇವೆ. ರಾತ್ರಿ 8.30 ರಿಂದ ಶ್ರೀ ಶಾರದಾ ಕಲಾಕೇಂದ್ರ ಪುತ್ತೂರು ಇದರ ಕುಂಬ್ರ ಶಾಖೆಯ ವಿದುಷಿ ದೀಪ್ತಿ ಡಿ.ಬಿ ಇವರ ಶಿಷ್ಯವೃಂದದಿಂದ‘ ನೃತ್ಯ ಸಮೂಹ’ ನಡೆಯಲಿದೆ.
ಸೆ.29ರಂದು ಸಂಜೆ 6.30 ರಿಂದ ‘ ಶ್ರೀ ದುರ್ಗಾನಮಸ್ಕಾರ ಪೂಜೆ’ ವೇದಮೂರ್ತಿ ಕೃಷ್ಣಕುಮಾರ ಉಪಾಧ್ಯಾಯ, ಪಟ್ಲಮೂಲೆ ಇವರ ನೇತೃತ್ವದಲ್ಲಿ ನಡೆಯಲಿದೆ. ರಾತ್ರಿ 7.30ರಿಂದ ಭಜನಾ ಸೇವೆ. ರಾತ್ರಿ ಗಂಟೆ 5-5ರಿಂದ ‘ ಸಾಮೂಹಿಕ ಆಯುಧ ಪೂಜೆ’ ನಡೆಯಲಿದೆ.ಸೆ.30 ರಂದು ರಾತ್ರಿ 7-೦೦ ರಿಂದ ಭಜನಾ ಸೇವೆ. ರಾತ್ರಿ 8.30 ರಿಂದ ‘ನವರಾತ್ರಿ ಉತ್ಸವದ ಸಮಾರೋಪ’ ನಡೆಯಲಿದೆ.
ಇದೇ ಸಂದರ್ಭದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಲಿದ್ದು ಅತಿಥಿಗಳಾಗಿ ಕೆಯ್ಯೂರು ಶ್ರೀಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ, ಪುತ್ತೂರು ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಸದಸ್ಯ ವಿನಯ ಸುವರ್ಣ, ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಬಾಲಕೃಷ್ಣ ರೈ ಮಾಡಾವು, ಉದ್ಯಮಿ ರಾಮಕೃಷ್ಣರೈ ಕುಕ್ಕುಂಜೋಡು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೆದಂಬಾಡಿ ಗ್ರಾಪಂನ 2 ನೇ ವಾರ್ಡ್ನ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮತ್ತು ಸಹಾಯಕಿಯರಾದ ಸಾರೆಪುಣಿ ಅಂಗನವಾಡಿ ಕೇಂದ್ರದ ಕಮಲಾಕ್ಷಿ ಮಂಜುನಾಥ ಗೌಡ ಇದ್ಯಪೆ ಮತ್ತು ಶ್ವೇತಾ ಪ್ರವೀಣ ಕೋಡಿಯಡ್ಕ, ಇದ್ಪಾಡಿ ಅಂಗನವಾಡಿ ಕೇಂದ್ರದ ಜಾನಕಿ ಇ ಬಳ್ಳಮಜಲು ಮತ್ತು ವೀಣಾ ಉಮೇಶ್ ನಾಯ್ಕ ಕೋಡಿಯಡ್ಕರವರುಗಳು ಗೌರವರ್ಪಾಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 9.30 ರಿಂದ ಕೆದಂಬಾಡಿ ಯುವರಂಗದ ಸದಸ್ಯರಿಂದ ಮತ್ತು ಊರವರಿಂದ ‘ಕಾರ್ಯಕ್ರಮ ವೈವಿಧ್ಯ’ ಮನರಂಜಿಸಲಿದೆ. ಪ್ರತಿ ದಿನ ರಾತ್ರಿ 9.೦೦ ಗಂಟೆಗೆ ಅನ್ನಸಂತರ್ಪಣೆ ನಡೆಯಲಿರುವುದು ಹಾಗೇ ಪ್ರತಿ ದಿನ ರಾತ್ರಿ 7 ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆ, ಪ್ರ.ಕಾರ್ಯದರ್ಶಿ ಅಗರಿ ಯಶೋಧರ ಚೌಟ ಪಟ್ಟೆತ್ತಡ್ಕ, ಕೋಶಾಧಿಕಾರಿ ಮುಂಡಾಳಗುತ್ತು ಮೋಹನ ಆಳ್ವ, ಶ್ರೀ ರಾಮ ಭಜನಾ ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್ ಕೋಡಿಯಡ್ಕ, ಕಾರ್ಯದರ್ಶಿ ನಿತೇಶ್ ರೈ ಕೋರಂಗ ಹಾಗೂ ಆಡಳಿತ ಸಮಿತಿ ಮತ್ತು ಭಜನಾ ಸಮಿತಿಯ ಸರ್ವ ಸದಸ್ಯರುಗಳು, ಭಕ್ತಾಧಿಗಳ ಪ್ರಕಟಣೆ ತಿಳಿಸಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಸೆ.22-ಭಕ್ತಿಪ್ರಧಾನ ನೃತ್ಯರೂಪಕ ‘ಮಕರ ಜ್ಯೋತಿ’. ಸೆ.23-ನೃತ್ಯಾರ್ಪಣಂ. ಸೆ.24: ಸಾಂಸ್ಕೃತಿಕ ವೈಭವ. ಸೆ.25: ಯಕ್ಷಗಾನ ಬಯಲಾಟ ‘ ಲೋಲಾವಿನೋದಿ ಶ್ರೀ ಕೃಷ್ಣ’.ಸೆ.26-ಸಾಂಸ್ಕೃತಿಕ ವೈಭವ-ಕುಸಲ್ದ ಎಸಲ್. ಸೆ.27- ಯಕ್ಷಗಾನ ತಾಳಮದ್ದಳೆ ‘ಊರ್ವಶಿ ಶಾಪ’.ಸೆ.28- ನೃತ್ಯ ಸಮೂಹ.ಸೆ.30-ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ.