ಗೌರವಾಧ್ಯಕ್ಷರಾಗಿ ಸುಬ್ರಹ್ಮಣ್ಯ ರೈ ಶೇಡಿ, ಅಧ್ಯಕ್ಷರಾಗಿ ದೀಕ್ಷಿತ್ ಅಮಿನ್, ಪ್ರಧಾನ ಕಾರ್ಯದರ್ಶಿಯಾಗಿ ಜಯದೀಪ್ ಆಯ್ಕೆ
ಕೆಯ್ಯೂರು: ಅಭಿನವ ಕೇಸರಿ ಮಾಡಾವು ಇದರ 2025-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಅಯ್ಯಪ್ಪ ಭಜನಾ ಮಂದಿರದಲ್ಲಿ ಗೌರವಾಧ್ಯಕ್ಷ ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ದೀಕ್ಷಿತ್ ಅಮೀನ್, ಉಪಾಧ್ಯಕ್ಷರಾಗಿ ಚೇತನ್ ಆಚಾರ್ಯ ಮಾಡಾವು, ಪ್ರಧಾನ ಕಾರ್ಯದರ್ಶಿಯಾಗಿ ಜಯದೀಪ್, ಸಂಘಟನಾ ಕಾರ್ಯದರ್ಶಿಯಾಗಿ ಕುಶನ್ ಜೊತೆ ಕಾರ್ಯದರ್ಶಿಯಾಗಿ ಮನೋಜ್ ಬೊಳಿಕಲ, ಅರ್ಚನಾ ರೈ, ಖಜಾಂಚಿಯಾಗಿ ಪ್ರಮೋದ್ ಹೆಗ್ಡೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕವಿತಾ ರೈ ಮಾಡಾವು, ಮಂಜುಳಾ ರೈ, ಶೀಲಾ, ರವಿಕಲ, ಕ್ರೀಡಾ ಕಾರ್ಯದರ್ಶಿಯಾಗಿ ಸಚಿನ್ ಪರ್ತ್ಯಡ್ಕ, ಭವಾನಿ ಶಂಕರರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಭಿನವ ಕೇಸರಿಯ ಗೌರವಧ್ಯಕ್ಷ ಸುಬ್ರಹ್ಮಣ್ಯ ರೈ ಶೇಡಿ, ಗೌರವ ಸಲಹೆಗಾರ ಪ್ರವೀಣ್ ರೈ ಶೇಡಿ, ಭಾಸ್ಕರ್ ರೈ ಮಠ, ರಾಜೇಶ್ ಭಟ್ ಮಾಡಾವು, ಸುಶಾಂತ್ ರೈ ಕಲಾಯಿ, ಶಶಿಧರ ಆಚಾರ್ಯ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.