ಪುತ್ತೂರು: ಈಶ ಎಜ್ಯುಕೇಶನಲ್ ಆಂಡ್ ಸೋಶಿಯಲ್ ಸರ್ವೀಸ್ ಟ್ರಸ್ಟ್(ರಿ) ನೆಲ್ಲಿಕಟ್ಟೆ ಪುತ್ತೂರು ಇದರ ಆಡಳಿತದಲ್ಲಿ ನಡೆಸಲ್ಪಡುವ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಈಶ ವಿದ್ಯಾಲಯ ನೆಲ್ಲಿಕಟ್ಟೆ ಪುತ್ತೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಹಿರಿಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಹಿತೈಷಿಗಳನ್ನು ಒಟ್ಟು ಸೇರಿಸಿ ಸೆ.21ರಂದು ಬೆಳಿಗ್ಗೆ 10.00 ಗಂಟೆಗೆ ಈಶ ವಿದ್ಯಾಲಯದ ಸಭಾಂಗಣದಲ್ಲಿ ವಿಶೇಷ ಸಭೆಯನ್ನು ಕರೆಯಲಾಗಿದೆ.
ಈ ಸಂಸ್ಥೆಯಲ್ಲಿ 2001 ರಿಂದ ಈ ತನಕ ನೇರವಾಗಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ., ಡಿಪ್ರೋಮಾ ಇನ್ ಮೊಂಟೆಸ್ಸರಿ ಟೀಚರ್ಸ್ ಟ್ರೈನಿಂಗ್, ಕಂಪ್ಯೂಟರ್, ಟೈಲರಿಂಗ್, ಬ್ಯೂಟೀಶಿಯನ್, ನವೋದಯ, ಸ್ಪೋಕನ್ ಇಂಗ್ಲೀಷ್, ಹಾಗೂ ಯಾವುದೇ ವಿಷಯಗಳಲ್ಲಿ ವಿದ್ಯಾರ್ಜನೆಗೈದ ಹಾಗೂ ವಿಶೇಷ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳು, ಹಿತೈಷಿಗಳು ಈ ವಿಶೇಷ ಸಭೆಯಲ್ಲಿ ಹಾಜರಿದ್ದು ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡಿ ಸಹಕರಿಸಬೇಕಾಗಿ ಈಶ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಯಂ ಗೋಪಾಲಕೃಷ್ಣ ಹಾಗೂ ಉಪಪ್ರಾಂಶುಪಾಲರಾದ ಶ್ರೀಮತಿ ಶಾರದಾಕೃಷ್ಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ 9448153379 ಸಂಖ್ಯೆಯನ್ನು ಸಂಪರ್ಕಿಸಿರಿ.