





ಪುತ್ತೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಜೀಪ್‌ವೊಂದನ್ನು ಪೊಲೀಸರು ತಡೆದು ಜೀಪ್‌ನಲ್ಲಿದ್ದ ದನವನ್ನು ರಕ್ಷಣೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಽಸಿದ ಘಟನೆ ಪುತ್ತೂರು ಪರ್ಲಡ್ಕ ಬೈಪಾಸ್‌ನಲ್ಲಿ ಸೆ.20ರಂದು ಸಂಜೆ ನಡೆದಿದೆ.


ಪಿಕಪ್ ಜೀಪಿನಲ್ಲಿದ್ದ ಅಬ್ದುಲ್ ಕರೀಂ ಮತ್ತು ಅಬ್ದುಲ್ ಜಮೀರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅವರು ಪಿಕಪ್ ಜೀಪಿನಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ಪರ್ಲಡ್ಕ ಬೈಪಾಸ್ ರಸ್ತೆಯಲ್ಲಿ ವಾಹನ ತಪಾಸಣೆ ಮಾಡಿದಾಗ ಸಾಗಾಟದ ಪರವಾನಿಗೆ ಇಲ್ಲದಿರುವುದು ಬೆಳಕಿಗೆ ಬಂದಿದೆ. ಘಟನೆಯಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ದನವನ್ನು ರಕ್ಷಿಸಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ.











