ಲೈವ್ ಅವತಾರ್ ಶೋ-ಪುತ್ತೂರು ಉತ್ಸವ ಉದ್ಘಾಟನೆ: ತ್ರಿಶೂಲ್ ಫ್ರೆಂಡ್ಸ್, ಹೊಳ್ಳ ಕ್ರ್ಯಾಕರ್ಸ್ ರವರಿಂದ ಅದ್ದೂರಿಯ ಆಯೋಜನೆ 

0

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು:ತ್ರಿಶೂಲ್ ಫ್ರೆಂಡ್ಸ್ ಹಾಗೂ ಹೊಳ್ಳ ಕ್ರ್ಯಾಕರ್ಸ್ ಸಂಯುಕ್ತ ಆಶ್ರಯದಲ್ಲಿ ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಲೈವ್ “ಅವತಾರ್ ಉತ್ಸವ್ ಪುತ್ತೂರು ಉತ್ಸವ” ಹೆಸರಿನಲ್ಲಿ ಸೆ.20 ರಿಂದ ನ.2 ರ ವರೆಗೆ ಸುಮಾರು 45 ದಿನಗಳ ಕಾಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಜರಗಲಿದ್ದು ಇದರ ಉದ್ಘಾಟನೆ ಕಾರ್ಯಕ್ರಮ ಸೆ.20 ರಂದು ಸಂಜೆ ನೆರವೇರಿತು.

ಧರೇಶ್ ರವರ ಕಾರ್ಯಕ್ರಮದಲ್ಲಿ ಯಾವಾಗಲೂ ಹೊಸತನವಿದೆ-ಪಂಜಿಗುಡ್ಡೆ ಈಶ್ವರ ಭಟ್:

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರವರು ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ತಿಂಗಳ ಹಿಂದೆ ಆಯೋಜಕ ಧರೇಶ್ ಹೊಳ್ಳರವರು ಈ ಪುತ್ತೂರು ಉತ್ಸವವನ್ನು ಆಯೋಜಿಸುತ್ತೇವೆ ಎಂದು ಹೇಳಿದಾಗ ನಮಗೆ ಭಾರಿ ಹೆಮ್ಮೆಯಾಯಿತು. ಧರೇಶ್ ಹೊಳ್ಳರವರು ಯಾವುದೇ ಕಾರ್ಯಕ್ರಮ ಮಾಡಿದರೂ ಅದರಲ್ಲಿ ಹೊಸತನವಿರುತ್ತದೆ ಅದರಲ್ಲಿ ಲಾಭ-ನಷ್ಟದ ಪ್ರಶ್ನೆ ಇರುವುದಿಲ್ಲ. ದೇವಸ್ಥಾನದ ವತಿಯಿಂದ ಪುತ್ತೂರು ಉತ್ಸವಕ್ಕೆ ಸಂಪೂರ್ಣ ಬೆಂಬಲವಿದ್ದು ಪುತ್ತೂರು ಹಾಗೂ ಆಸುಪಾಸಿನ ಜನರು ಪುತ್ತೂರು ಉತ್ಸವಕ್ಕೆ ಆಗಮಿಸಿ ಆಶೀರ್ವದಿಸಬೇಕು ಎಂದರು.

ಪುತ್ತೂರು ಉತ್ಸವ ಹಬ್ಬವಾಗಿ ನಡೆಯಲಿ-ಮುರಳೀಕೃಷ್ಣ ಹಸಂತ್ತಡ್ಕ:

ಹಿಂದೂ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ ಮಾತನಾಡಿ, ಕಾರ್ಯಕ್ರಮದ ಆಯೋಜಕ ಧರೇಶ್ ಹೊಳ್ಳ ತಂಡ ಪುತ್ತೂರಿನಲ್ಲಿ ಹೊಸತನವನ್ನು ಪರಿಚಯಿಸುವತ್ತ ಕೈ ಹಾಕಿದೆ. ಧರೇಶ್ ರವರ ನಾಯಕತ್ವ ಗುಣ ಹಾಗೂ ಅವರ ತಂಡದ ಟೀಮ್ ವರ್ಕ್ ಎಲ್ಲರೂ ಮೆಚ್ಚುವಂತಹುದು‌ ಮಾತ್ರವಲ್ಲ ಪುತ್ತೂರಿನಲ್ಲಿ ಜರಗುವ ಗಣೇಶೋತ್ಸವ, ಸ್ತಬ್ಧ ಚಿತ್ರಗಳು ಹೀಗೆ ಎಲ್ಲದರಲ್ಲೂ ಅವರ ಭಾಗವಹಿಸುವಿಕೆ ಇದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ತಾಯಿ ಉಳ್ಳಾಲ್ತಿ ಕಾರ್ಯಕ್ರಮಕ್ಕೆ ಎಂದಿಗೂ ಬಿಡಲಾರರು ಜೊತೆಗೆ ಪುತ್ತೂರು ಉತ್ಸವ ಸರ್ವರ ಸಹಕಾರದಿಂದ ಹಬ್ಬವಾಗಿ ನಡೆಯಲಿ ಎಂದರು.

ಉತ್ಸವ ಮೇಳ ಆಯೋಜನೆ ಯಶಸ್ವಿಯಾಗಲಿ-ಸೀತಾರಾಮ ರೈ:

ಉದ್ಯಮಿ ಪದ್ಮಶ್ರೀ ಸೋಲಾರ್ ಸಿಸ್ಟಂನ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ, ಧರೇಶ್ ರವರು ತ್ರಿಶೂಲ್ ಫ್ರೆಂಡ್ಸ್ ಎಂಬ ತಂಡವನ್ನು ಕಟ್ಟಿ ಒಳ್ಳೆಯ ರೀತಿಯಲ್ಲಿ ಸಂಘಟನೆಯನ್ನು ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಹಿನ್ನೆಡೆ ಎಂಬುದಿಲ್ಲ. ಅದರಂತೆ ಮುಂದಿನ ದಿನಗಳಲ್ಲಿ ನಡೆಯುವ ಈ ಉತ್ಸವ ಮೇಳ ಯಶಸ್ವಿಯಾಗಿ ನಡೆಯಲಿ ಎಂದರು.

ಮೊಟ್ಟೆತ್ತಡ್ಕ ಅಗ್ನಿಶಾಮಕ ದಳದ ಅಧಿಕಾರಿ ಶಂಕರ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ್ ಕುಮಾರ್, ಮ್ಯಾನೇಜರ್ ಹರೀಶ್ ಸಹಿತ ತ್ರಿಶೂಲ್ ಫ್ರೆಂಡ್ಸ್ ಹಾಗೂ ಹೊಳ್ಳ ಕ್ರ್ಯಾಕರ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದರು. ಆಯೋಜಕ ಧರೇಶ್ ಹೊಳ್ಳ ಸ್ವಾಗತಿಸಿ, ವಂದಿಸಿದರು.

ವಿವಿಧ ಬಗೆಯ ಫುಡ್ ಕೋರ್ಟ್, ಶಾಲಾ ಬ್ಯಾಗ್, ಉಪಕರಣಗಳು ಸೇರಿದಂತೆ ವಿವಿಧ ಸ್ಟಾಲ್ ಗಳು, ಅಮೇಜ್ಮೆಂಟ್ ಪಾರ್ಕ್, ಜಾಯೈಂಟ್ ವ್ಹೀಲ್, ಬ್ರೇಕ್ ಡ್ಯಾನ್ಸ್, ಕೊಲಂಬಸ್, ಡ್ರ್ಯಾಗನ್, ಮಕ್ಳಳಿಗೆ ಆಟೋಟಗಳು ಹೀಗೆ ವಿವಿಧ ಮನೋರಂಜನೆಗಳು ಈ ಪುತ್ತೂರು ಉತ್ಸವ ಹೊಂದಿದ್ದು, ಪುತ್ತೂರು ಹಾಗೂ ಆಸುಪಾಸಿನ ಜನತೆ ಈ ಉತ್ಸವದಲ್ಲಿ ಪಾಲ್ಗೊಂಡು ಉತ್ಸವವನ್ನು ದ್ವಿಗುಣಗೊಳಿಸಬೇಕು.

-ತ್ರಿಶೂಲ್ ಫ್ರೆಂಡ್ಸ್ ಹಾಗೂ ಹೊಳ್ಳ ಕ್ರ್ಯಾಕರ್ಸ್ ತಂಡ

LEAVE A REPLY

Please enter your comment!
Please enter your name here