ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಸೇವಾ ದರ ಪರಿಷ್ಕರಣೆ

0

ನೆಲ್ಯಾಡಿ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 8 ವರ್ಷಗಳ ಬಳಿಕ ಸೇವಾ ದರಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ.
ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ದರ ಪರಿಷ್ಕರಣೆಗೆ ಸಂಬಂಧಿಸಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ 20.01.2024ರ ಸಭಾ ನಿರ್ಣಯದಲ್ಲಿ ಕೈಗೊಂಡ ನಿರ್ಣಯದಂತೆ ಮನವಿ ಮಾಡಿತ್ತು. ದೇವಸ್ಥಾನದ ಒಟ್ಟು 20 ಸೇವೆಗಳ ಪೈಕಿ 8 ಸೇವೆಗಳ ದರವನ್ನು ಸಣ್ಣ ಪ್ರಮಾಣದಲ್ಲಿ ಪರಿಷ್ಕರಿಸಲಾಗಿದೆ. ಪರಿಷ್ಕೃತ ದರಗಳ ಪ್ರಕಾರ ಅವಲಕ್ಕಿ ಪಂಚಕಜ್ಜಾಯ ಸೇವೆ ರೂ.70ರಿಂದ ರೂ.80ಕ್ಕೆ, ಕಡ್ಲೆ ಪಂಚಕಜ್ಜಾಯ ರೂ.20ರಿಂದ ರೂ.30ಕ್ಕೆ, ಅಪ್ಪ ಪ್ರಸಾದ ರೂ.30ರಿಂದ ರೂ.40ಕ್ಕೆ, ಲಾಡು ಪ್ರಸಾದ ರೂ.20ರಿಂದ ರೂ.30ಕ್ಕೆ ಏರಿಕೆಯಾಗಿದೆ. ಘನ ವಾಹನ ಪೂಜೆ ರೂ.75ರಿಂದ ರೂ.100ಕ್ಕೆ, ಲಘು ವಾಹನ ಪೂಜೆ ರೂ.100ರಿಂದ ರೂ.200ಕ್ಕೆ, ಅಷ್ಟೋತ್ತರ ಅರ್ಚನೆ ರೂ.40ರಿಂದ ರೂ.50ಕ್ಕೆ ಹೆಚ್ಚಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ಆಗಮ ಪಂಡಿತರು ದೇವಳಕ್ಕೆ ಭೇಟಿ ನೀಡಿ ಸೇವಾ ದರ ಪಟ್ಟಿಯನ್ನು ಪರಿಶೀಲಿಸಿ ಅಗತ್ಯ ಬದಲಾವಣೆಗಳನ್ನು ಶಿಫಾರಸು ಮಾಡಿದ್ದರು. ಸಾಮಾಗ್ರಿಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅಲ್ಪ ಪ್ರಮಾಣದಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ. ದರ ಪರಿಷ್ಕರಣೆಯಲ್ಲಿ ಸರ್ಕಾರದ ಯಾವುದೇ ರೀತಿಯ ಪಾತ್ರವಿಲ್ಲ. ಸಂಪೂರ್ಣವಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಭಾ ನಿರ್ಣಯದ ಪ್ರಕಾರವೇ ದರ ಪರಿಷ್ಕರಣೆ ಮಾಡಲಾಗಿದೆ.

-ಸುಬ್ರಹ್ಮಣ್ಯ ಶಬರಾಯ ಕೆ.
ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ

LEAVE A REPLY

Please enter your comment!
Please enter your name here