ಅಶೋಕ ಜನಮನ: ಗ್ರಾಮ ಪ್ರಚಾರ ಕಾರ್ಯಕ್ಕೆ ಮಾಣಿಲ ಕುಕ್ಕಾಜೆ ಕ್ಷೇತ್ರದಲ್ಲಿ ಚಾಲನೆ

0

ಬಡವರಿಗೆ ಆಸರೆಯಾಗಲು ದೇವರೇ ಅಶೋಕ್ ರೈ ಅವರನ್ನು ಶಾಸಕರನ್ನಾಗಿ ಮಾಡಿದ್ದಾರೆ: ಶ್ರೀಕೃಷ್ಣ ಗುರೂಜಿ


ಪುತ್ತೂರು: ಚುನಾವಣೆಯಲ್ಲಿ ಅನೇಕ ಮಂದಿ ಸ್ಪರ್ಧೆ ಮಾಡುತ್ತಾರೆ ಕೆಲವರು ಸೋಲುತ್ತಾರೆ, ಕೆಲವರು ಗೆಲ್ಲುತ್ತಾರೆ ಆದರೆ ಅಶೋಕ್ ರೈ ಅವರನ್ನು ಬಡವರಿಗೆ ದಾರಿದೀಪವಾಗಲು, ಬಡವರಿಗೆ ಆಸರೆ ನೀಡಲು ದೇವರೇ ಶಾಸಕರನ್ನಾಗಿ ಮಾಡಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿಯಾಗದು ಎಂದು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಕೃಷ್ಣಗುರೂಜಿ ಅವರು ಹೇಳಿದರು.ಅವರು ಶ್ರೀ ಕ್ಷೇತ್ರದಲ್ಲಿ ನಡೆದ ಅಶೋಕ ಜನಮನ 2025 ದೀಪಾವಳಿ ಕಾರ್ಯಕ್ರಮದ ಗ್ರಾಮ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು.


ಅಶೋಕ್ ರೈ ಶಾಸಕರಾಗಿದ್ದು ಹಣ ಮಾಡುವ ಉದ್ದೇಶದಿಂದಲ್ಲ, ಸಂಪತ್ತು ಅವರಿಗೆ ದೇವರು ಮೊದಲೇ ಕೊಟ್ಟಿದ್ದಾನೆ, ಅವರು ತನ್ನ ಸಂಪತ್ತಿನ ಒಂದು ಪಾಲನ್ನು ಬಡವರಿಗೆ ಕಳೆದ 13 ವರ್ಷಗಳಿಂದ ನೀಡುತ್ತಿದ್ದಾರೆ. ಬಡವರಿಗೆ ನಾನಾ ರೀತಿಯ ಸಹಾಯ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಇವರ ಸಮಾಜ ಸೇವೆ, ಬಡವರ ಸೇವೆ ದೇವರಿಗೆ ಇಷ್ಟವಾಗಿದೆ, ಇದಕ್ಕಾಗಿಯೇ ದೇವರು ಅವರಿಗೆ ಅಧಿಕಾರ ಕೊಟ್ಟಿದ್ದಾರೆ ಎಂಬುದನ್ನು ನಾವು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕು. ಚುನಾವಣೆಯ ಸಂದರ್ಭದಲ್ಲಿ ನಮ್ಮ ಕ್ಷೇತ್ರಕ್ಕೆ ಬಂದು ಆಶೀರ್ವಾದ ಪಡೆದು ಹೋಗಿದ್ದರು ಎಂಬುದನ್ನು ನೆನಪಿಸಿದ ಗುರೂಜಿಯವರು ಬಡಬಗ್ಗರಿಗೆ ಒಂದು ಹೊತ್ತಿನ ಊಟ ಕೊಡಬೇಕು ಅವರಿಗೆ ಮನಸ್ಸಿಗೆ ಸಂತೋಷವಾಗಬೇಕು ಎಂದು ನಡೆಸುವ ಕಾರ್ಯಕ್ರಮ ದೇವರಿಗೆ ಇಷ್ಟವಾಗಿದೆ ಇದೇ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚು ಜನರು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪುತ್ತೂರಿನ ಈ ವ್ಯಕ್ತಿಗೆ ಪ್ರಧಾನಿಯಾಗುವ ಯೋಗವನ್ನು ದೇವರು ಕರುಣಿಸಲಿದ್ದಾನೆ, ಅಶೋಕ ಜನಮನ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ಪೂರ್ಣ ಬೆಂಬಲ ಇದ್ದು ಈ ಬಾರಿ ನಿರೀಕ್ಷೆಗೂ ಮೀರಿ ಜನ ಸೇರಲಿದ್ದಾರೆ ಎಂದು ಹೇಳಿದರು.

ಬಡವರ ಸೇವೆ ಎಂದಿಗೂ ಕೊನೆಗೊಳಿಸುವುದೇ ಇಲ್ಲ: ಅಶೋಕ್ ರೈ
ನಾನು ಯಾವುದೇ ಅಧಿಕಾರದ ಅಸೆಯಿಂದ ಬಡವರ ಸೇವೆಯನ್ನು ಮಾಡಿಲ್ಲ, ನಾನು ಮಾಡಿದ ಬಡವರ ಸೇವೆಯ ಕಾರಣಕ್ಕೆ ಜನರ ಆಶೀರ್ವಾದದ ಜೊತೆಗೆ ದೇವರ ಆಶೀರ್ವಾದ ಸಿಕ್ಕಿದ ಕಾರಣ ನಾನು ಇಂದು ಈ ಹಂತಕ್ಕೆ ಬರಲು ಸಾಧ್ಯವಾಯಿತು, ಜನರ ಸೇವೆಯನ್ನು ಎಂದಿಗೂ ಕೊನೆಗೊಳಿಸುವುದಿಲ್ಲ, ದೇವರು ನನಗೆ ಎಷ್ಟು ವರ್ಷ ಸೇವೆ ಮಾಡಲು ಅವಕಾಶ ಕೊಡುತ್ತಾನೋ ಅಷ್ಟು ವರ್ಷ ಸೇವೆ ಮಾಡಿಯೇ ಸಿದ್ದ ಎಂದು ಹೇಳಿದರು.ಕಳೆದ 13 ವರ್ಷದಲ್ಲಿ ತನ್ನ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಬಡವರಿಗೆ ಸಹಾಯ ಮಾಡುತ್ತಿದ್ದೇನೆ. ಮನೆ ಇಲ್ಲದ ಅನೇಕ ಕುಟುಂಬಗಳಿಗೆ ಸಣ್ಣ ಮನೆಯನ್ನಾದರೂ ನಿರ್ಮಿಸಿದ್ದೇನೆ ಎಂಬ ತೃಪ್ತಿ ನನಗಿದೆ. ಬಡವರ ಮಕ್ಕಳ ವಿದ್ಯಾಬ್ಯಾಸಕ್ಕೆ ನೆರವು, ಯುವಕರಿಗೆ ಉದ್ಯೋಗ, ಅನಾರೋಗ್ಯ ಪೀಡಿತ ಅಶಕ್ತರಿಗೆ ನೆರವು, ಉದ್ಯೋಗ ಮೇಳೆ, ಆರೋಗ್ಯ ಶಿಭಿರ ಹೀಗೇ ಹತ್ತು ಹಲವು ನೆರವನ್ನು ನೀಡಿದ್ದೇನೆ. ನನ್ನಲ್ಲಿರುವ ಸಂಪತ್ತಿನ ಒಂದಂಶವನ್ನು ಬಡವರಿಗೆ ನೀಡಬೇಕು ಎಂಬ ಉದ್ದೇಶದಿಂದ ನೀಡುತ್ತಿದ್ದೇನೆ ವಿನಾ ಬೇರೆ ಯಾವುದೇ ಉದ್ದೇಶದಿಂದಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಬಡವರಿಗೆ ಸಂತೋಷವಾದರೆ ಅದುವೇ ನನಗೆ ತೃಪ್ತಿ
ತನ್ನ ಕ್ಷೇತ್ರದ ಯಾವುದೇ ಒಬ್ಬ ಬಡವರನಿಗೆ ನೆರವು ನೀಡಿದರೆ ಅದುವೇ ನನಗೆ ದೊಡ್ಡ ಸಂತೋಷವಾಗುತ್ತದೆ. ಕಷ್ಟದಲ್ಲಿರುವ ಕಾರಣ ನನ್ನ ಕಚೇರಿಗೆ ಬಂದು ನೆರವು ಕೇಳುತ್ತಾರೆ, ನೆರವು ಕೇಳಲು ಬರುವ ವ್ಯಕ್ತಿ ಆರ್ಥಿಕವಾಗಿ ಶಕ್ತನಾಗಿದ್ದರೆ ನನ್ನ ಬಳಿ ಬರುತ್ತಿರಲಿಲ್ಲ ಎಂಬುದರ ಬಗ್ಗೆ ನನಗೆ ಅರಿವಿದೆ. ಬಡವರ ಸೇವೆ ಅದು ದೇವರಿಗೆ ಇಷ್ಟವಾದ ಕಾರ್ಯವಾಗಿದೆ. ಯಾರೇ ಏನೇ ಹೇಳಲಿ , ನೆರವು ಪಡೆದವರು ಅದನ್ನು ಮರೆಯಲಿ, ಏನೇ ಮಾಡಲಿ ನಾನು ತನ್ನ ಸೇವೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಹೇಳಿದರು.ಹಣ ಮಾಡಬೇಕು ಎಂದು ರಾಜಕೀಯಕ್ಕೆ ಬಂದಿಲ್ಲ. ಬಡವರಿಗೆ ಕಿಂಚಿತ್ತು ಸೇವೆ ನೀಡುವ ಎಂಬ ಏಕೈಕ ಉದ್ದೇಶದಿಂದ ನಾನು ರಾಜಕೀಯಕ್ಕೆ ಬಂದಿದ್ದೇನೆ ನಿಮ್ಮ ಆಶೀರ್ವಾದವೇ ನನಗೆ ದೊಡ್ಡ ಶಕ್ತಿ ಎಂದು ಹೇಳಿದರು.

ಜನಪ್ರತಿನಿಧಿಗಳಿಗೆ ಅಶೋಕ್ ರೈ ಮಾದರಿ: ಎಂ ಕೆ ಕುಕ್ಕಾಜೆ
ಕರ್ನಾಟಕದ ಜನಪ್ರತಿನಿಧಿಗಳಿಗೆ ಪುತ್ತೂರು ಶಾಸಕ ಅಶೋಕ್ ರೈ ಮಾದರಿಯಾಗಿದ್ದಾರೆ. ಯಾವುದೇ ಜಾತಿ, ಮತ, ಧರ್ಮ ಬೇದವಿಲ್ಲದೆ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ಕಾಣುವ ಅವರು ಜನಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಮಾದರಿಯೆನಿಸಿದ್ದಾರೆ. ಅಧಿಕಾರ, ಹಣ ಬಲದಿಂದ ಶಾಸಕರಾದವರು ಅನೇಕ ಮಂದಿ ಇದ್ದಾರೆ ಅಂಥವರಿಂದ ಜನರಿಗೆ ಸೇವೆ ದೊರೆಯುವುದು ಸುಲಭದ ವಿಚಾರವಲ್ಲ. ಜನರ ಮಧ್ಯೆ ನಿಂತು ಜನರ ಕಷ್ಟವನ್ನು ಆಲಿಸುವ ಮನಸ್ಸು ಶಾಸಕರಲ್ಲಿರಬೇಕು ಅದಕ್ಕೆ ಅಶೋಕ್ ರೈ ಸಾಕ್ಷಿಯಾಗಿದ್ದಾರೆ ಎಂದು ಕುಕ್ಕಾಜೆ ಕಾಳಿಕಾಂಬ ಆಂಜನೇಯ ಕ್ಷೆತ್ರದ ಮೊಕ್ತೇಸರ ಎಂ ಕೆ ಕುಕ್ಕಾಜೆ ಹೇಳಿದರು. ಶಾಸಕ ಅಶೋಕ್ ರೈ ಅವರ ಜನ ಸೇವೆ ಅವರ ಶಕ್ತಿ ಇರುವ ತನಕ ಕರ್ನಾಟಕಕ್ಕೆ ಬೇಕಾಗಿದೆ ಎಂಬುದು ಪ್ರತೀಯೊಂದು ಮನಸ್ಸುಗಳ ಆಗ್ರಹವಾಗಿದೆ ಎಂದು ಹೇಳಿದರು.

ಅ.20 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಅಶೋಕ ಜನಮನ ದೀಪಾವಳಿ ಕಾರ್ಯಕ್ರಮಕ್ಕೆ ಪ್ರತೀಯಬ್ಬರೂ ಭಾಗವಹಿಸಬೇಕು. ಕುಟುಂಬ ಸಹಿತರಾಗಿ ಕಾರ್ಯಕ್ರಮಕ್ಕೆ ಬಂದು ಸಂತೋಷದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಜನರಿಗೆ ಕಾರ್ಯಕ್ರಮದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು ಕಾರ್ಯಕ್ರಮಕ್ಕೆ ಬಂದು ಸಹಭೋಜನದಲ್ಲಿ ಭಾಗವಹಿಸಿ ಶಾಸಕರನ್ನು ಆಶೀರ್ವದಿಸಬೇಕು ಎಂದು ಕೈಮುಗಿದು ಬೇಡುತ್ತಿದ್ದೇನೆ.
ಸುದೇಶ್ ಶೆಟ್ಟಿ , ಟ್ರಸ್ಟ್ ಕಾರ್ಯಾಧ್ಯಕ್ಷರು

ಕಾರ್ಯಕ್ರಮದಲ್ಲಿ ಅಳಿಕೆ ಗ್ರಾ.ಪಂ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್,ವಿಷ್ಣುಭಟ್ ಕೆಮ್ಮುಂಜೆ, ಟ್ರಸ್ಟ್ ಸದಸ್ಯರಾದ ರಾಮಣ್ಣ ಪಿಲಿಂಜ, ಮೋಹನ್ ಗುರ್ಜಿನಡ್ಕ ಮಾಣಿಲ ಗ್ರಾಪಂ ಅಧ್ಯಕ್ಷ ಶ್ರೀಧರ್ ಮಾಣಿಲ, ಉಪಸ್ಥಿತರಿದ್ದರು. ಪ್ರವೀಣ್ ಸಣ್ಣಗುತ್ತು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here