ಪುತ್ತೂರು: ರಾಜ್ಯ, ರಾಷ್ಟ್ರ ಮಟ್ಟದ ಈಜುಪಟುಗಳ ಕೊಡುಗೆ ನೀಡಿದ ಪರ್ಲಡ್ಕ ಡಾ.ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ 15 ದಿನಗಳ ಕಾಲ ನಡೆಯಲಿರುವ ದಸರಾ ಈಜು ತರಬೇತಿ ಶಿಬಿರವು ಸೆ.21ರಿಂದ ಪ್ರಾರಂಭಗೊಂಡಿದೆ.
ಶಿಬಿರವು ಸೆ.21ರಿಂದ ಪ್ರಾರಂಭಗೊಂಡು ಅ.5ರ ತನಕ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆ ತನಕ ತರಬೇತಿ ನಡೆಯಲಿದೆ. ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುವುದು. ವೈಯಕ್ತಿಕ ಈಜು ತರಬೇತಿಗಳು ಲಭ್ಯವಿದೆ. ಈಜು ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ಶಿಬಿರದಲ್ಲಿ ಪಾಲ್ಗೊಂಡು ಈಜು ಕಲಿಯುವವರಿಗೆ ಸುವರ್ಣಾವಕಾಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಾಲವನದ ಈಜುಕೊಳ ಅಥವಾ 944914363, 9743702470, 7899583697, 9108464327 ನಂಬರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.