ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ಮಾದಕ ವಸ್ತು ಜಾಗೃತಿ ಕಾರ್ಯಕ್ರಮ

0


ಪುತ್ತೂರು: ಮಾದಕ ವಸ್ತು ವ್ಯಸನದಿಂದ ಸಮಾಜದ ಸ್ವಾಸ್ಥ್ಯ ನಾಶವಾಗುತ್ತದೆ. ಹೆಚ್ಚಾಗಿ ವಿದ್ಯಾರ್ಥಿಗಳು ಮತ್ತು ಯುವಜನತೆ ವ್ಯಸನಕ್ಕೆ ಒಳಗಾಗುತ್ತಾರೆ ಎಂದು ಪುತ್ತೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ದಿವ್ಯಶ್ರೀ ಬಿ. ಹೆಚ್. ಹೇಳಿದರು.


ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯ ಕೌಶಲ್ಯ ಸಭಾಭವನದಲ್ಲಿ ಸೆ.22ರಂದು ವಿದ್ಯಾರ್ಥಿಗಳಿಗಾಗಿ ನಡೆದ ಮಾದಕ ವಸ್ತು -ಜಾಗ್ರತಿ ಕಾರ್ಯಕ್ರಮದಲ್ಲಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ನಡೆಸಿದರು. ಅಬಕಾರಿ ನಿರೀಕ್ಷಕಿ ಜೋಸ್ಲಿನ್ ಟಿ ಫೆರ್ನಾಂಡಿಸ್ ವಿವಿಧ ರೀತಿಯ ಮಾದಕ ವಸ್ತುಗಳು ಮತ್ತು ಅವುಗಳ ಪ್ರಭಾವ ಮತ್ತು ದುಷ್ಪರಿಣಾಮದ ಬಗ್ಗೆ ವಿವರಿಸಿದರು.


ಪ್ರಹಸನ:
ಉಪ ಅಧೀಕ್ಷಕರ ನೇತೃತ್ವದಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳಿಂದ ಮಾದಕ ವಸ್ತುಗಳ ವಿತರಣೆಯಲ್ಲಿ ಅಮಾಯಕ ಸಾರ್ವಜನಿಕರನ್ನು ಹೇಗೆ ಬಳಿಸಿಕೊಳ್ಳುತ್ತಾರೆ ಮತ್ತು ತಿಳಿದು ಅಥವಾ ತಿಳಿಯದೆ ಈ ಜಾಲದಲ್ಲಿ ಸಿಕ್ಕಿಹಾಕಿಕೊಂಡು ಶಿಕ್ಷೆಗೆ ಗುರಿಯಾಗುವ ಕುರಿತು ಪ್ರಹಸನ ಕಾರ್ಯಕ್ರಮವನ್ನು ಅಭಿನಯದ ಮೂಲಕ ಪ್ರಸ್ತುತಪಡಿಸಿದರು. ಅಧ್ಯಕ್ಷತೆ ವಹಿಸಿ ಸಂಸ್ಥೆಯ ಸಂಚಾಲಕ ಯು.ಪಿ. ರಾಮಕೃಷ್ಣ ರವರು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಚಾರ್ಯ ಪ್ರಕಾಶ್ ಪೈ ಬಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಬಕಾರಿ ಇಲಾಖೆಯ ಪ್ರೇಮಾನಂದ ಕಾರ್ಯಕ್ರಮ ಸಂಯೋಜಿಸಿದ್ದರು. ಸಂಸ್ಥೆಯ ಅಧ್ಯಾಪಕ ಮತ್ತು ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here