ಶಾಸಕ ಅಶೋಕ್ ರೈ ಮನವಿಗೆ ಸ್ಪಂದನೆ : ಆನಡ್ಕ ಹಾಲು ಉತ್ಪಾದಕರ ಸಂಘಕ್ಕೆ ಜಮೀನು ಮಂಜೂರಾತಿ

0

ಪುತ್ತೂರು:ಪುತ್ತೂರು ವಿಧಾನ ಸಭಾ ಕ್ಷೇತ್ರದ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಆನಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಕ್ಕೆ ಕಟ್ಟಡ ನಿರ್ಮಾಣಕ್ಕೆ ನಿವೇಶನ ಮಂಜೂರಾತಿಗೆ ಕಂದಾಯ ಇಲಾಖೆಗೆ ಆದೇಶ ನೀಡುವಂತೆ ಕಂದಾಯ‌ ಸಚಿವ ಕೃಷ್ಣ ಬೈರೇಗೌಡರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದು ,ಶಾಸಕರ‌ ಮನವಿಗೆ ಸಚಿವರು ಸ್ಪಂದನೆ ನೀಡಿದ್ದಾರೆ.


ಆನಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘವು ಪುತ್ತೂರು ತಾಲೂಕಿನಲ್ಲಿ ಅತೀ ಹೆಚ್ಚು ಮಹಿಳಾ ಪ್ರತಿನಿಧಿಗಳು ಇರುವ ಸಂಘವಾಗಿರುತ್ತದೆ ಹಾಗೂ ಹಲವಾರು ವರ್ಷಗಳಿಂದ ಸೂಕ್ತವಾದ ಸ್ಥಳವಾಕಾಶ ಇಲ್ಲದೇ ಖಾಸಗಿ ವ್ಯಕ್ತಿಗಳ ಕಟ್ಟಡದಲ್ಲಿ ವ್ಯವಹಾರಿಸಿಕೊಂಡು ಬಂದಿರುತ್ತಾರೆ. ಸದರಿ ಸಂಘಕ್ಕೆ ಯಾವುದೇ ಸ್ಥಿರಾಸ್ತಿ ಇರುವುದಿಲ್ಲ. ಆದ್ದರಿಂದ ಪುತ್ತೂರು ತಾಲೂಕು ನರಿಮೊಗ್ರು ಗ್ರಾಮ ಪಂಚಾಯತ್ ಶಾಂತಿಗೋಡು ಗ್ರಾಮದ ಸ.ನಂ:249/1ಪಿ ರಲ್ಲಿ 0.15 ಸೆಂಟ್ಸ್ ಜಮೀನನ್ನು ಆನಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ. ಮಂಜೂರುಗೊಳಿಸುವಂತೆ ಇಲಾಖೆಗೆ ಶೀಫಾರಸ್ಸು ಮಾಡುವಂತೆ ಸಚಿವರಿಗೆ ಶಾಸಕರು ಮನವಿ ಮಾಡಿದ್ದರು.

LEAVE A REPLY

Please enter your comment!
Please enter your name here