





ಪುತ್ತೂರು: ಗಾಂಧೀ ಜಯಂತಿ, ಐಸಿಡಿಯಸ್ ದಿನಾಚರಣೆಯನ್ನು ಗ್ರಾಮ ಪಂಚಾಯತ್ ಸದಸ್ಯರಾದ ರಾಮಣ್ಣ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು.


ಸಮಾರಂಭದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಭವ್ಯ, ಸದಸ್ಯರಾದ ದಯಾನಂದ ಕಲ್ಲಾಜೆ, ಚಂದ್ರಶೇಖರ ದೇವರಹಿತ್ಲು, ಸಂಧ್ಯಾ ಡಿ ನೇಲಡ್ಕ, ಪೂರ್ಣಿಮಾ ಕೈಲಾಜೆ, ಆಶಾಕಾರ್ಯಕರ್ತೆ ಮೋಹಿನಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲಲಿತಾ ಕೈಲಾಜೆ, ಎಂ.ಪಿ.ಕೆ ಸಂಧ್ಯಾ ಕೈಲಾಜೆ, ಎಲ್.ಸಿ.ಆರ್ ಪ್ರಿಯಾ, ಸ್ವಚ್ಚತಾ ಸಿಬ್ಬಂದಿಗಳು, ಸ್ತ್ರೀಶಕ್ತಿಯವರು, ಮಕ್ಕಳ ಪೋಷಕರು, ಸಂಜೀವಿನಿ ಒಕ್ಕೂಟದ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಮಕ್ಕಳು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ರೇವತಿ ಎ. ಸ್ವಾಗತಿಸಿ, ವಂದಿಸಿದರು. ಅಂಗನವಾಡಿ ಸಹಾಯಕಿ ಜಯಂತಿ ಸಹಕರಿಸಿದರು.















