ಪುತ್ತೂರು: ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಯೋಗದಲ್ಲಿ ಅ.1ರಂದು ಪುತ್ತೂರು ಬಂಟರ ಭವನದ ಅಂಗಳದಲ್ಲಿ ಕೀರ್ತಿ ಶೇಷ ಪಿಲಿ ರಾಧಾಣ್ಣರವರ ಶಾರದಾ ಹುಲಿ ತಂಡದಿಂದ ಪಿಲಿ ಪಜ್ಜೆ(ಹುಲಿ ವೇಷ ಕುಣಿತ), ಆಯುಧ ಪೂಜೆ, ಭಜನಾ ಕಾರ್ಯಕ್ರಮ ಜರಗಿತು.

ತುಳುನಾಡು ಸಂಸ್ಕೃತಿ- ಸಂಸ್ಕಾರಗಳ ಆಗರ- ನಳಿನ್ ಕುಮಾರ್ ಕಟೀಲ್: ಸನ್ಮಾನ ಸಮಾರಂಭವನ್ನು ನಡೆಸಿಕೊಟ್ಟ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ರವರು ಮಾತನಾಡಿ, ನವರಾತ್ರಿ ಪರ್ವಕಾಲದಲ್ಲಿ ವಿಜಯದಶಮಿಯ ಈ ಶುಭದಿನದಂದು ಧರ್ಮ ಚಿಂತನೆಯ ಸಾಕಾರವಾಗಿರುವ ಹುಲಿ ವೇಷವನ್ನು ಗೌರವಿಸುವ ಪರಂಪರೆಯನ್ನು ಪುತ್ತೂರು ತಾಲೂಕು ಬಂಟರ ಸಂಘ ಮಾಡಿರುವುದು ಪ್ರಶಂಸನೀಯವಾಗಿದ್ದು, ಕೃಷಿ ಆಧಾರಿತ ಪ್ರದೇಶವಾಗಿರುವ ಈ ತುಳುನಾಡು ಸಂಸ್ಕೃತಿ- ಸಂಸ್ಕಾರಗಳ ಆಗರವಾಗಿದೆ. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ನೇತೃತ್ವದಲ್ಲಿ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಪ್ರಶಂಸಿಸಿದರು.





ಹುಲಿ ವೇಷ ವಿಶ್ವಕ್ಕೆ ಪರಿಚಯವಾಗಬೇಕು- ಅಶೋಕ್ ಕುಮಾರ್ ರೈ: ಕಾರ್ಯಕ್ರಮ ಉದ್ಘಾಟನೆಗೈದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡಿ ಪುತ್ತೂರು ಬಂಟರ ಸಂಘ ಆಯೋಜನೆ ಮಾಡಿರುವ ಪಿಲಿ ಪಜ್ಜೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಮುಂದೊಂದು ದಿನ ಕಂಬಳ ಕ್ರೀಡೆಯಂತೆ ಹುಲಿ ವೇಷ ಸ್ವರ್ಧೆಯು ಬೆಂಗಳೂರಿನಲ್ಲೂ ನಡೆದು, ಹೆಸರನ್ನು ಪಡೆಯುವ ಮೂಲಕ ವಿಶ್ವಕ್ಕೆ ಪರಿಚಯವಾಗಬೇಕು ಎಂದರು. ಕಾವು ಹೇಮನಾಥ ಶೆಟ್ಟಿಯವರ ನೇತೃತ್ವದಲ್ಲಿ ತಾಲೂಕು ಬಂಟರ ಸಂಘವು ಪಿಲಿ ರಾಧಾಣ್ಣ ಅವರ ನೆನಪಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ತುಂಬಾ ಸಂತೋಷ ತಂದಿದೆ ಎಂದರು.
ಹುಲಿ ವೇಷದ ಸೊಬಗನ್ನು ನೋಡುವ ಅವಕಾಶ- ಕಾವು ಹೇಮನಾಥ ಶೆಟ್ಟಿ: ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸ್ವಾಗತಿಸಿ ಮಾತನಾಡಿ, ಈ ವರ್ಷ ಪ್ರಥಮ ಬಾರಿಗೆ ನಾವು ಸಂಘದ ಮೂಲಕ ಪಿಲಿ ರಾಧಣ್ಣ ತಂಡದಿಂದ ಹುಲಿ ವೇಷದ ಸೊಬಗನ್ನು ನೋಡುವ ಅವಕಾಶ ಕಲ್ಪಿಸಿದ್ದೇವೆ. ಮುಂದೆಯೂ ಇಂತಹ ಕಾರ್ಯಕ್ರಮ ಆಯೋಜನೆಯನ್ನು ಮಾಡುತ್ತೇವೆ ಎಂದು ಹೇಳಿದರು.
ಡಾ| ಹೇಮಂತ್ ರೈಯವರಿಗೆ ಸನ್ಮಾನ: ಡಾಕ್ಟರೇಟ್ ಪದವಿಯನ್ನು ಪಡೆದಿರುವ ಉದ್ಯಮಿ, ಶರವೂರು ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹೇಮಂತ್ ರೈ ಮನವಳಿಕೆಗುತ್ತು ಅವರನ್ನು ತಾಲೂಕು ಬಂಟರ ಸಂಘದಿಂದ ಸನ್ಮಾನಿಸಲಾಯಿತು.
ಐಸಿರಿ ತಂಡದಿಂದ ಭಜನೆ: ತಾಲೂಕು ಮಹಿಳಾ ಬಂಟರ ವಿಭಾಗದ ಐಸಿರಿ ಭಜನಾ ತಂಡದಿಂದ ಭಜನೆ ನಡೆಯಿತು. ತಂಡವನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಗೌರವಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ದಯಾನಂದ ರೈ ಮನವಳಿಕೆಗುತ್ತು, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ, ಕಾರ್ಯಾಧ್ಯಕ್ಷ ಜಯಶೀಲ ಅಡ್ಯಂತಾಯ, ಪುತ್ತೂರು ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ ಹಾಗೂ ಪದಾಧಿಕಾರಿಗಳು, ಬಂಟರ ಯಾನೆ ನಾಡವರ ಮಾತೃ ಸಂಘ, ತಾಲೂಕು ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಪದಾಽಕಾರಿಗಳು ಉಪಸ್ಥಿತರಿದ್ದರು. ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರವಿಪ್ರಸಾದ್ ಶೆಟ್ಟಿ ಬನ್ನೂರು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ರಂಜಿನಿ ಶೆಟ್ಟಿ, ರವಿಚಂದ್ರ ರೈ ಕುಂಬ್ರ ಹಾಗೂ ಭಾಸ್ಕರ್ ರೈ ವಿವಿಧ ಕಾರ್ಯಕ್ರಮದಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ವಾಹನಗಳಿಗೆ ಆಯುಧ ಪೂಜೆ ನಡೆಯಿತು.