ಪರ್ಪುಂಜ: ರಾಮಜಾಲು ಶ್ರೀ ರಕ್ತೇಶ್ವರಿ ಶ್ರೀ ಪಂಜುರ್ಲಿ ಪರಿವಾರ ದೈವಗಳ ಶಿಲಾ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಗೆ ಆಯ್ಕೆ

0

ಗೌರವಾಧ್ಯಕ್ಷ: ಮೋಹನದಾಸ ರೈ ಕುಂಬ್ರ, ಅಧ್ಯಕ್ಷ: ಗಣೇಶ್ ಕೋಡಿಬೈಲು, ಪ್ರ.ಕಾರ್ಯದರ್ಶಿ: ಸಂಪತ್ ಕುಮಾರ್, ಕೋಶಾಧಿಕಾರಿ: ರಾಜೇಶ್ ರೈ ಪರ್ಪುಂಜ, ಸಂಚಾಲಕ: ರತನ್ ರೈ ಕುಂಬ್ರ

ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ರಕ್ತೇಶ್ವರಿ, ಶ್ರೀ ಪಂಜುರ್ಲಿ ಪರಿವಾರ ದೈವಗಳ ಶಿಲಾ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನ.7ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಶಿಲಾ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷರಾಗಿ ಕುಂಬ್ರ ಮೋಹನದಾಸ ರೈ, ಅಧ್ಯಕ್ಷರಾಗಿ ಗಣೇಶ್ ಕೋಡಿಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಸಂಪತ್ ಕುಮಾರ್ ಅತಿಥಿ, ಸಂಚಾಲಕರಾಗಿ ರತನ್ ರೈ ಕುಂಬ್ರ, ಉಪಾಧ್ಯಕ್ಷರಾಗಿ ಶೀನಪ್ಪ ನಾಯ್ಕ ಗುರಿಕುಮೇರು, ಕಾರ್ಯದರ್ಶಿಯಾಗಿ ಶ್ರೀಮತಿ ಸುರೇಶ್, ಜತೆ ಕಾರ್ಯದರ್ಶಿಯಾಗಿ ರೇಖಾ ಎಸ್, ಕೋಶಾಧಿಕಾರಿಯಾಗಿ ರಾಜೇಶ್ ರೈ ಪರ್ಪುಂಜರವರುಗಳನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ವಿವಿಧ ಸಮಿತಿಯ ಸಂಚಾಲಕರನ್ನುಗಳನ್ನು, ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ವೈಧಿಕ ಸಮಿತಿಗೆ ಸಂಚಾಲಕರಾಗಿ ಹರೀಶ್ ಆಚಾರ್ಯ, ಸ್ವಾಗತ ಸಮಿತಿಗೆ ರಾಜೇಶ್ ಪೂಜಾರಿ ಪಿದಪಟ್ಲ, ಪ್ರಸಾದ ವಿತರಣೆಗೆ ರಾಜೇಶ್ ಗೌಡ, ಸ್ವಚ್ಚತಾ ಸಮಿತಿಗೆ ದಿನೇಶ್ ಗೌಡ, ಮಹಿಳಾ ಸಮಿತಿ ಸಂಚಾಲಕರಾಗಿ ರೇಖಾ ರೈ, ಹೊರೆ ಕಾಣಿಕೆ ಸಮಿತಿಗೆ ರಾಕೇಶ್ ರೈ ಪರ್ಪುಂಜ, ಸಭಾ ಕಾರ್ಯಕ್ರಮ ನಿರ್ವಹಣೆಗೆ ಪ್ರಜ್ವಲ್ ಗೌಡ ಶಬರಿಗುರಿ, ಪ್ರಚಾರ ಮಾಧ್ಯಮ ಸಮಿತಿಗೆ ನಿತಿನ್ ಗೌಡ, ಸೇವಾ ಕಾರ್ಯಾಲಯದ ಪ್ರಮೀಳಾ ಎಸ್, ಅಲಂಕಾರ ಸಮಿತಿಗೆ ಅಶ್ವಿನ್ ಪೂಜಾರಿ ಪಿದಪಟ್ಲ,ನೀರಾವತಿ ಸಮಿತಿಗೆ ಕಾಂತಪ್ಪ ಪೂಜಾರಿ, ಆಹಾರ ಸಮಿತಿಗೆ ಸುರೇಶ್ ನಾಯಕ್‌ ರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here