ಜವುಳಿ ಉದ್ಯಮದಲ್ಲಿ ರಾಧಾ’ಸ್‌ನಿಂದ ಮತ್ತೊಂದು ಕೊಡುಗೆ: ಸೀರೆಗಳ ವಿಸ್ತೃತ ಮಳಿಗೆ ಶುಭಾರಂಭ

0

ಪುತ್ತೂರು: ಜವುಳಿ ಉದ್ಯಮದಲ್ಲಿ ಕಳೆದ ಮೂರು ದಶಕಗಳಿಂದ ಪುತ್ತೂರು ಸಹಿತ ಹತ್ತೂರಿನಲ್ಲಿಯೂ ಮನೆ ಮಾತಾಗಿರುವ ಪುತ್ತೂರಿನ ಕೋರ್ಟ್ ರಸ್ತೆಯ ರಾಧಾ’ಸ್ ನಲ್ಲಿ ವಿಸ್ತೃತವಾಗಿ ನಿರ್ಮಾಣಗೊಂಡಿರುವ ಹವಾನಿಯಂತ್ರಿತ ವಿಶಾಲವಾದ ಸೀರೆ ಮಳಿಗೆಯು ಅ.೬ರಂದು ಉದ್ಘಾಟನೆಗೊಂಡಿತು.

ನೂತನ ಮಳಿಗೆಯನ್ನು ಉಡುಪಿ ಡ್ರೆಸ್ ಫ್ಯಾಲೇಸ್ ನ ರಮೇಶ್ ಶೆಣೈ, ಕೃಷ್ಣ ಕಾಮತ್ ಹಾಗೂ ರಾಘವೇಂದ್ರ ಪ್ರಭು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಯುವ ಉದ್ಯಮಿ ಸಹಜ್ ರೈ ಬಳೆಜ್ಜ ಮಾತನಾಡಿ, ಸಣ್ಣ ಕೊಠಡಿಯಲ್ಲಿ ಪ್ರಾರಂಭಗೊಂಡಿರುವ ರಾಧಾಸ್ ಮಳಿಗೆಯು ಉತ್ತಮ ಸೇವೆ, ಗ್ರಾಹಕರ ಪ್ರೀತಿಯಿಂದ ಬೃಹತ್ ಅಗಿ ಬೆಳೆದಿದೆ. ಸಂಸ್ಥೆಯ ಮ್ಹಾಲಕರು ವ್ಯಾಪಾರ ಮಾತ್ರ ಸೀಮಿತವಾಗಿಲ್ಲ. ಧಾರ್ಮಿಕ, ಸಾಮಾಜಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಹತ್ತೂರಲ್ಲಿ ಪ್ರಸಿದ್ದಿ ಪಡೆದಿದೆ. ಮಳಿಗೆಯ ಸಿಬ್ಬಂದಿಗಳೂ ತಮ್ಮದೇ ಸಂಸ್ಥೆ ಎಂಬ ಭಾವನೆಯಿಂದ ಕೆಲಸ ಮಾಡುತ್ತಿದ್ದು ಬೆಳವಣೆಗೆಗೆ ಸಹಕಾರಿಯಾಗಿದೆ. ಮಳಿಗೆಯು ಇನ್ನಷ್ಟು ಅಭಿವೃದ್ಧಿ ಹೊಂದಿ ಜವುಳಿ ಉದ್ಯಮದಲ್ಲಿ ಕರಾವಳಿಯ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಮಾಯಿದೇ ದೇವುಸ್ ಚರ್ಚ್‌ನ ಧರ್ಮಗುರು ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಮೂವತ್ತು ವರ್ಷಗಳ ಹಿಂದೆ ಪ್ರಾರಂಭಗೊಂಡ ಮಳಿಗೆಯು ಇಂದು ಹೆಮ್ಮರವಾಗಿ ಬೆಳೆದು ಹೊಸ ಚಿಗುರೊಡೆದು ಫಲ ನೀಡುತ್ತಿದೆ. ಜೊತೆಗೆ ನೂರಾರು ಮಂದಿಗೆ ಉದ್ಯೋಗ ನೀಡುವ ಮೂಲಕ ಅವರ ಕುಟುಂಬದ ಬೆಳವಣಿಗೆಯಲ್ಲಿ ಸಹಕಾರಿಯಾಗಿದ್ದಾರೆ. ಪರಿಶ್ರಮವನ್ನು ಪ್ರಮಾಣಿಕತೆಯಿಂದ ನಿರ್ವಹಿಸಿ ಪ್ರತಿಫಲ ಕಂಡುಕೊಂಡಿದ್ದಾರೆ. ಕೆಲಸವನ್ನು ಸೇವಾ ಮನೋಭಾವದಿಂದ ಮಾಡಿದ್ದಾರೆ. ಪುತ್ತೂರಿನ ಅಭಿವೃದ್ಧಿಗೆ ರಾಧಾ’ಸ್ ಮಳಿಗೆಯೂ ಕೊಡುಗೆ ನೀಡಿದ್ದು ಇನ್ನಷ್ಟು ಬೆಳೆಯಲಿ ಎಂದರು.

ಎಸ್.ಬಿ ದಾರಿಮಿ ಉಪ್ಪಿನಂಗಡಿ ಮಾತನಾಡಿ, ಒಂದು ಕಾಲದಲ್ಲಿ ಉತ್ತಮ ವಸ್ತ್ರಗಳನ್ನು ಗಲ್ಫ್ ದೇಶಗಳಿಂದ ಖರೀದಿಸುತ್ತಿದ್ದರು. ಈಗ ರಾಧಾ’ಸ್‌ನಂತ ಮಳಿಗೆಗಳು ನಮ್ಮಲ್ಲಿದ್ದು ಗಲ್ಫ್‌ನಿಂದ ಬರುವವರು ಕಾರಿನಲ್ಲಿ ಬಂದು ರಾಧಾಸ್‌ನಿಂದ ಖರೀದಿಸುತ್ತಾರೆ. ಗಲ್ಫ್‌ಗಿಂತ ಗುಣಮಟ್ಟದ ವಸ್ತ್ರ ಭಾರತದಲ್ಲೇ ಲಭ್ಯವಿದೆ. ರಾಧಾ’ಸ್ ಮಳಿಗೆಗಳು ಮಂಗಳೂರು, ಬೆಂಗಳೂರಿಗೂ ವಿಸ್ತರಿಸಬೇಕು. ಸಾಮಾಜಿಕ ಜಾಲ ತಾಣಗಳಲ್ಲಿ ಬರುವಂತ ಸಂದೇಶಗಳಿಗೆ ಕವಿಗೊಡದೇ ಸೇವೆ ಹಾಗೂ ಗುಣಮಟ್ಟವನ್ನು ಗಮನಿಸಿ ಖರೀದಿಸಬೇಕು ಎಂದ ಅವರು, ಸನಾತನ ಭಾರತೀಯ ಸಂಸ್ಕೃತಿಯಲ್ಲಿ ರಾಧಾ ಎಂಬ ಹೆಸರಿಗೆ ವಿಶಿಷ್ಠ ಸ್ಥಾನಮಾನವಿದೆ. ರಾಧಾ ಎಂಬುದು ಪ್ರೀತಿಯ ಸಂಕೇತ. ಕೃಷ್ಣನ ಒಡನಾಡಿಯಾಗಿದ್ದ ರಾಧೆ ಕೃಷ್ಣ ಭಕ್ತಿ ಮತ್ತು ಪ್ರೀತಿಗೆ ಹೆಸರಾಗಿದೆ. ಅಂತ ಹೆಸರೇ ಮಳಿಗೆಗಿದ್ದು ಶುಭ ಸೂಚನೆಯಾಗಿದೆ ಎಂದು ಹೇಳಿದರು.

ರಾಧಾ’ಸ್ ಮಳಿಗೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ದಾರಾವಾಹಿ ನಟಿ ಶಿಲ್ಪಾ ಕಾಮತ್ ಮಾತನಾಡಿ, ಪುತ್ತೂರಿನ ರಾಧಾ’ಸ್ ಮಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದಕ್ಕೆ ಬಹಳಷ್ಟು ಹೆಮ್ಮೆಯಾಗಿದೆ. 1996 ಪ್ರಾರಂಭಗೊಂಡ ಮಳಿಗೆ ಬಹಳಷ್ಟು ಬೆಳೆದಿದೆ. ಮಳಿಗೆಯು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ. ಇನ್ನಷ್ಟು ಮಳಿಗೆಗಳು ಪ್ರಾರಂಭವಾಗಲಿ ಎಂದು ಹಾರೈಸಿದರು.
1996ರಲ್ಲಿ ರಾಧಾ ಜವುಳಿ ಮಳಿಗೆಯ ಪ್ರಾರಂಭದಲ್ಲಿ ಪ್ರಥಮ ಗ್ರಾಹಕರಾಗಿದ್ದ ಬಿ.ಎಚ್ ಮಹಮ್ಮದ್ ಬಪ್ಪಳಿಗೆಯವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರಿಗೆ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕಾವು ಪ್ರವಾಸೋದ್ಯಮದಿಂದ ಅಭಿವೃದ್ಧಿಯಾಗಿದೆ. ಹೀಗೆಯೇ ಪುತ್ತೂರಿಗೂ ಹೊರ ಭಾಗದ ಜನರು ಬರಬೇಕು. ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು ಕ್ಷೇತ್ರಗಳಿಗೆ ಬರುವ ಭಕ್ತಾದಿಗಳು ಪುತ್ತೂರಿಗೂ ಆಗಮಿಸಬೇಕು. ಅದಕ್ಕಾಗಿ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಪ್ರಾರಂಭಿಸಲಾಗಿದೆ. ಅಲ್ಲಿಗೆ ಬರುವ ಅರ್ಧದಷ್ಟು ಜನರ ಬಂದರೂ ಪುತ್ತೂರಿನ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಆಗ ಇಲ್ಲಿನ ಜವುಳಿ, ಆಭರಣ, ಹೊಟೇಲ್ ಉದ್ಯಮಗಳೂ ಅಭಿವೃದ್ಧಿಯಾಗಲಿದ್ದು ಹೀಗಾಗಿ ಪ್ರವಾಸೋದಮ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.

ಯುವ ಉದ್ಯಮಿ ಸಹಜ್ ರೈ ಬಳೆಜ್ಜರವರ ಪತ್ನಿ ದೀಕ್ಷಾ ವಿಸ್ತೃತ ಮಳಿಗೆಯಲ್ಲಿ ಸೀರೆಯ ಪ್ರಥಮ ಖರೀದಿ ಮಾಡಿದರು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಈಶ್ವರ್ ಬೆಡೇಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಉದ್ಯಮಿ ಶಿವರಾಮ ಆಳ್ವ, ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಅಶೋಕ್ ಪ್ರಭು, ಟಿಎನ್‌ಸಿ ಸಂಸ್ಥೆಯ ರಮನಾಥ ಕೋಟ್ಯಾನ್, ನಗರ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ಸಹಿತ ಹಲವು ಮಂದಿ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು.
ಸಂಸ್ಥೆಯ ಮ್ಹಾಲಕರಾದ ಗಣೇಶ್ ಕಾಮತ್ ಹಾಗೂ ಪ್ರಕಾಶ್ ಕಾಮತ್ ಅತಿಥಿಗಳನ್ನು ಗೌರವಿಸಿದರು. ವಿ.ಜೆ ವಿಖ್ಯಾತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಳಿಗೆಯ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here