ಸ್ಪರ್ಧಾತ್ಮಕ ರೀತಿಯಲ್ಲಿ ಬೆಳೆಯುತ್ತಿರುವ ಶಾಖೆ – ಚಿದಾನಂದ ಬೈಲಾಡಿ
ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘಗಳ ಶಾಖೆಗಳಲ್ಲಿ ಎಸ್ಎಮ್ಟಿ ಶಾಖೆ ಸ್ಪರ್ಧಾತ್ಮಕ ರೀತಿಯಲ್ಲಿ ಬೆಳೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಹೇಳಿದರು.

ಪುತ್ತೂರು ಎಪಿಎಂಸಿ ರಸ್ತೆ ಮಣಾಯಿ ಅರ್ಚ್ನಲ್ಲಿ ಸ್ವಂತ ಕಟ್ಟಡದಲ್ಲಿ ಪ್ರಧಾನ ಕಚೇರಿ ಮತ್ತು ಶಾಖೆಯನ್ನು ಹೊಂದಿರುವ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಕಾಣಿಯೂರು, ಬೆಳ್ಳಾರೆ, ವಿಟ್ಲ ಶಾಖೆಗಳ ಪೈಕಿ ಒಕ್ಕಲಿಗ ಸಮುದಾಯ ಪತ್ತಿನ ಸಂಘದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರು ಎಸ್ಎಮ್ಟಿ ಶಾಖೆಯಲ್ಲಿ ಅ.10ರಂದು ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2002ರಲ್ಲಿ ಆರಂಭಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಅರಂಭದಲ್ಲಿ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲೇ ಇದೇ ಕಟ್ಟಡದಲ್ಲಿ ತನ್ನ ಕಾರ್ಯಾಚಟುವಟಿಕೆ ಆರಂಭಿಸಿಕೊಂಡು ಹಂತ ಹಂತವಾಗಿ ಉತ್ತಮ ವ್ಯವಹಾರದೊಂದಿಗೆ ಎಲ್ಲರ ಭರವಸೆಗೆ ಪೂರಕವಾಗಿ ಸ್ಪಂದಿಸುತ್ತಿದೆ. ಈ ಭಾರಿ ನಮ್ಮ ಸಂಘದಲ್ಲಿ 244 ಕೋಟಿ ರೂಪಾಯಿಷ್ಟು ದಾಖಲೆಯ ವ್ಯವಹಾರ ಆಗಿದೆ.
ಒಟ್ಟು ವ್ಯವಹಾರದಲ್ಲಿ 202 ಕೋಟಿ ರೂಪಾಯಿ ಹೆಚ್ಚು ವ್ಯವಹಾರ ನಡೆಸುವ ಮೂಲಕ ಖಾಸಗಿ ಸಹಕಾರಿ ಸಂಘದಲ್ಲೂ ಸ್ಪರ್ಧಾತ್ಮಕ ವ್ಯವಹಾರ ನಡೆಯುತ್ತಿದೆ. ಇದರಲ್ಲಿ ಸಿಬ್ಬಂದಿಗಳ ಕಾರ್ಯಕ್ಷಮತೆ ಇದೆ ಎಂದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಶುಭ ಹಾರೈಸಿದರು.
ಈ ಸಂದರ್ಭ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಸಂಘದ ನಿರ್ದೇಶಕರು ಮತ್ತು ಎಸ್ಎಮ್ಟಿ ಶಾಖೆಯ ಅಧ್ಯಕ್ಷರು ಆಗಿರುವ ಜಿನ್ನಪ್ಪ ಗೌಡ ಮಳುವೇಲು, ಸಂಘದ ನಿರ್ದೇಶಕರಾದ ರಾಮಕೃಷ್ಣ ಗೌಡ ಕೆ, ಪ್ರವೀಣ್ ಕುಂಟ್ಯಾನ, ಸಂಜೀವ ಮಗೌಡ ಕೆ, ಎಸ್ಎಮ್ಟಿ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಸುರೇಶ್ ಗೌಡ ಕಲ್ಲಾರೆ, ಗೌರಿ ಬನ್ನೂರು, ಬಾಬು ಗೌಡ ಬಂಡಾರದ ಮನೆ, ಸೀತಾರಾಮ ಗೌಡ ಪೆರಿಯತ್ತೋಡಿ, ತಿಮ್ಮಪ್ಪ ಗೌಡ ಕೆಮ್ಮಾಯಿ, ಮೀನಾಕ್ಷಿ ಡಿ ಗೌಡ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಆಂತರಿಕ ಲೆಕ್ಕ ಪರಿಶೋಧಕ ಶ್ರೀಧರ್ ಗೌಡ ಕಣಜಾಲು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ್ ಕೆ, ಎಪಿಎಂಸಿ ಶಾಖೆಯ ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಗೌಡ ಕೆ, ಲಿಂಗಪ್ಪ ಗೌಡ ತೆಂಕಿಲ, ಶ್ರೀ ಮಹಾಲಿಂಗೇಶ್ವರ ಐಟಿಐ ಸಂಸ್ಥೆಯ ಸಲಹಾ ಸಮಿತಿಯ ಉಮೇಶ್ ಗೌಡ ಮಳವೇಲು, ಮಹಿಳಾ ಸಂಘದ ಅಧ್ಯಕ್ಷೆ ವಾರಿಜ ಕೆ ಗೌಡ, ಒಕ್ಕಲಿಗ ಯುವ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ,ಪ್ರೇಮನಾಥ ಗೌಡ, ವಾಹನ ವ್ಯಾಲ್ಯೂವೇಟರ್ ಜಯರಾಮ ಹಿರಿಂಜ, ಒಕ್ಕಲಿಗ ಗೌಡ ಸೇವಾ ಸಂಘದ ಕೋಶಾಧಿಕಾರಿ, ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಇದರ ಪುತ್ತೂರು ಘಟಕದ ಅಧ್ಯಕ್ಷ ಶಿವರಾಮ ಮತಾವು, ಪ್ರೇರಣಾ ಟ್ರಸ್ಟ್ನ ನಾಗೇಶ್ ಕೆಡೆಂಜಿ, ವಸಂತ ವೀರಮಂಗಲ, ಮಾಜಿ ನಿರ್ದೇಶಕರಾದ ನಾರಾಯಣ ಗೌಡ ಆರುವಾರ, ಎಸ್ಸಿಡಿಸಿಸಿ ಬ್ಯಾಂಕ್ ಮ್ಯಾನೇಜರ್ ಹರೀಶ್ ರೈ, ಎಪಿಎಂಸಿ ಶಾಖಾ ವ್ಯವಸ್ಥಾಪಕ ವಿನೋದ್ರಾಜ್, ಯಶ್ವಿತ್, ದೀಕ್ಷಿತ್, ಕೊರಗಪ್ಪ ಗೌಡ, ಸದಸ್ಯರಾದ ಪುಟ್ಟಣ್ಣ ಗೌಡ, ಗಿರಿಜ, ಪದ್ಮಯ್ಯ ಗೌಡ, ದಿನಕರ ಶೆಟ್ಟಿ, ದೇವಪ್ಪ ಗೌಡ, ದಯಾನಂದ ಗೌಡ, ಎಸ್ಎಮ್ಟಿ ಶಾಖೆಯ ಸಿಬ್ಬಂದಿಗಳು, ಸಂಘದ ಸದಸ್ಯರು ಮತ್ತು ಗ್ರಾಹಕರು ಉಪಸ್ಥಿತರಿದ್ದರು. ಎಸ್ಎಮ್ಟಿ ಶಾಖೆಯ ಉಪಾಧ್ಯಕ್ಷ ಜಿನ್ನಪ್ಪ ಗೌಡ ಮಳುವೇಲು ಸ್ವಾಗತಿಸಿ, ಶಾಖಾ ವ್ಯವಸ್ಥಾಪಕಿ ನಿಶ್ಚಿತ ಯು.ಡಿ ವಂದಿಸಿದರು. ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಹರೀಶ್ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಲಕ್ಷ್ಮೀ ಪೂಜೆ ನಡೆಯಿತು.