ಪುತ್ತೂರು : ಅರಿಯಡ್ಕ ಶೇಖಮಲೆ ಶಿವಪ್ಪ ರವರ ಮನೆಯಲ್ಲಿ ಅಶೋಕ ಜನಮನ ಕಾರ್ಯಕ್ರಮದ ಪ್ರಚಾರ ಸಭೆ ಮತ್ತು ಆಮಂತ್ರಣ ಪತ್ರ ಬಿಡುಗಡೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಟ್ರಸ್ಟಿನ ಪ್ರಮುಖರಾದ ಬಾಲಕೃಷ್ಣ ಪೂಜಾರಿ ಮಾತನಾಡಿ, ಶಾಸಕರ ಕಾರ್ಯಕ್ರಮ ದೀಪಾವಳಿ ಪ್ರಯುಕ್ತ ನಡೆಯುವ ಸಹ ಭೋಜನ ಮತ್ತು ಪತ್ರ ವಿತರಣೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರ ಕಚೇರಿಯ ಸಿಬಂದಿ ಪ್ರವೀಣ್ ಬನ್ನೂರು , ಯೋಗೀಶ್ ಸಾಮಾನಿ, ಕೋಡಿಂಬಾಡಿ ವಲಯ ಅಧ್ಯಕ್ಷ ಮೋನಪ್ಪ ಗೌಡ, ಆರ್ಯಾಪು ವಲಯ ಅಧ್ಯಕ್ಷ ಗಿರೀಶ್ ರೈ ಮತ್ತು ಅರಿಯಡ್ಕ ವಲಯ ಅಧ್ಯಕ್ಷ ಇಕ್ಬಾಲ್ ಹುಸೇನ್, ಸತೀಶ್ ಎಸ್ ,ಸಾರ್ಥಕ ರೈ ಅರಿಯಡ್ಕ, ಬಸಿರ್, ಚಂದ್ರಶೇಖರ ಮಣಿಯಾಣಿ, ರಫೀಕ್ ದರ್ಖಾಸು, ಶ್ರೀರಾಮ್ ಪಕ್ಕಳ ಈಶ್ವರಮಂಗಲ, ಜನಾರ್ದನ ಬಳ್ಳಿಕಾನ, ರಾಜೇಶ್ , ಕೇಶವ, ಹಮೀದ್ ಮತ್ತಿತರು ಭಾಗವಹಿಸಿದ್ದರು.