ಸ್ನೇಹ ಸಂಗಮದ ಪದಾಧಿಕಾರಿಗಳಿಂದ ಸಹಾಯಹಸ್ತ

0

ಪುತ್ತೂರು: ಬಹಳ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಸ್ನೇಹ ಸಂಗಮ ಯೂನಿಯನ್ ನೂತನ ಅಧ್ಯಕ್ಷ ಅನಿಲ್ ಜಟ್ಟಿಪಳ್ಳ ಕೆಲ ದಿನಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದು, ಬಡ ಕುಟುಂಬ ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಅವರ ಕುಟುಂಬಕ್ಕೆ ಸ್ನೇಹ ಸಂಗಮ ಸುಳ್ಯ ಘಟಕವು ಸಹಾಯಹಸ್ತವನ್ನು ಚಾಚಿದರು.

ಸ್ನೇಹ ಸಂಗಮ ಸುಳ್ಯ ಘಟಕ, ಪುತ್ತೂರು ತಾಲೂಕಿನ ಸ್ನೇಹ ಸಂಗಮದ ಪದಾಧಿಕಾರಿಗಳು ಸೇರಿ ಸುಮಾರು 10,000 ರೂ.ಗಳ ಧನಸಹಾಯವನ್ನು ಸುಳ್ಯ ತಾಲೂಕಿನ ಜಟ್ಟಿಪಾಳ್ಯ ಹಸ್ತಾಂತರಿಸಲಾಯಿತು. ಸ್ನೇಹಸಂಗಮದ ಅಧ್ಯಕ್ಷ ತಾರಾನಾಥ ಗೌಡ ಬನ್ನೂರು, ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಸಂಚಾಲಕ ಅರವಿಂದ್ ಪೆರಿಗೇರಿ, ಜೊತೆ ಕಾರ್ಯದರ್ಶಿ ಲಕ್ಷ್ಮಣ್ ಬನ್ನೂರು, ಸದಸ್ಯರಾದ ಕೇಶವ ಶೇಖಮಲೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here