





ಆಲಂಕಾರು: ಸರ್ಕಾರ ರೈತರಿಗೆ ಮಾರಕವಾಗುವ ಯೋಜನೆಗಳ ಅನುಷ್ಠಾನಕ್ಕೆ ಮುಂದಾದಾಗ ಮಲೆನಾಡು ಹಿತರಕ್ಷಣಾ ವೇದಿಕೆ ತಾತ್ಕಲಿಕವಾಗಿ ತಡೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಎಡವಟ್ಟಿನಿಂದ ನೂರಾರು ವರ್ಷದಿಂದ ಕೃಷಿ ಮಾಡುತ್ತಿದ್ದ ಭೂಮಿಯನ್ನು ಅರಣ್ಯ ಇಲಾಖೆ ಕಸಿದುಕೊಳ್ಳುತ್ತಿದೆ, ಈ ನಿಟ್ಟಿನಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆ ಕಡಬ ತಾಲೂಕು ಕಚೇರಿ ಮುಂಭಾಗದಲ್ಲಿ ನ.18 ರಂದು ರೈತರ ಹಕ್ಕೊತ್ತಾಯ ಸಭೆಯನ್ನು ಹಮ್ಮಿಕೊಂಡಿದೆ ಎಂದು ಮಲೆನಾಡು ಹಿತರಕ್ಷಣಾ ವೇದಿಕೆಯ ಜಿಲ್ಲಾ ಪ್ರಮುಖ್ ಆಶೋಕ್ ಗೌಡ ಮೂಲೆಮಜಲು ತಿಳಿಸಿದರು.



ಹಕ್ಕೊತ್ತಾಯ ಸಭೆಯ ಪೂರ್ವಭಾವಿಯಾಗಿ ಆಲಂಕಾರು ಪೇಟೆಯಲ್ಲಿ ನಡೆದ ರೈತ ಜಾಗೃತಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಮಲೆನಾಡು ಹಿತರಕ್ಷಣಾ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ, ಯುವ ಪ್ರಮುಖ್ ಮನೀಷ್ ಪದೇಲ, ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಶೇಖರ ಹಳೆನೂಜಿ, ಬಲ್ಪ-ಕೇನ್ಯ ಗ್ರಾ.ಪಂ ಅಧ್ಯಕ್ಷ ಹರ್ಷಿತ್ , ನ್ಯಾಯವಾದಿ ಲೋಕೇಶ್ ಗೌಡ, ಪ್ರಮುಖರಾದ ಉಮೇಶ್ ಶೆಟ್ಟಿ ಸಾಯಿರಾಂ, ಜಯಪ್ರಕಾಶ್ ಕೂಜಿಕೋಡು ಮೊದಲಾದವರು ಉಪಸ್ಥಿತರಿದ್ದರು.
ಮಲೆನಾಡು ಹಿತರಕ್ಷಣಾ ಸಮಿತಿ ಸಂಪರ್ಕ ಪ್ರಮುಖ್ ರಮಾನಂದ ಎಣೆಮಜಲು ಸ್ವಾಗತಿಸಿ ವಂದಿಸಿದರು.














