





ಪುತ್ತೂರು: ಕಳೆದ ಸೆ.27,28ರಂದು ರಾಮಕುಂಜದಲ್ಲಿ ನಡೆದ ವಿಭಾಗ ಮಟ್ಟದ 17ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಬೆಂಗಳೂರು ಬಸವೇಶ್ವರ ನಗರದಲ್ಲಿ ನಡೆಯುವ ರಾಜ್ಯಮಟ್ಟದ ಕಬಡ್ಡಿ
ಪಂದ್ಯಾಟಕ್ಕೆ ವಿಮಾನದ ಮೂಲಕ ಪಯಣ ಬೆಳೆಸಿದ್ದಾರೆ.



ಇತ್ತೀಚೆಗೆಷ್ಟೆ ತನ್ನ ಸಿಬ್ಬಂದಿಗಳಿಗೆ ವಿಮಾನಯಾನ ಅವಕಾಶದ ಕೊಡುಗೆ ಕಲ್ಪಿಸಿದ್ದ ಎಸ್.ಆರ್.ಕೆ.ಲ್ಯಾಡರ್ ಮಾಲಕ ಕೇಶವ ಅಮೈ ಅವರು ಇದೀಗ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಶಾಲೆಯ ಕಬಡ್ಡಿ ಪಂದ್ಯಾಟದ 9 ಮಂದಿ ಕ್ರೀಡಾಪಟುಗಳನ್ನು ಹಾಗೂ ಇಬ್ಬರು ಕೋಚ್ಗಳನ್ನು ನ.9ರಂದು ವಿಮಾನದ ಮೂಲಕ ಪಂದ್ಯಾಟಕ್ಕೆ ಕಳುಹಿಸಿದ್ದಾರೆ. ವಿಮಾನಯಾನದ ವೆಚ್ಚವನ್ನು ಕೇಶವ ಅಮೈ ವಹಿಸಿದ್ದಾರೆ. ಕ್ರೀಡಾಪಟುಗಳಾದ ಧನ್ವಿ, ದೀಕ್ಷಾ, ರಮ್ಯ, ತನುಜ, ಸಿಂಚನ, ಪ್ರತೀಕ್ಷ, ದೀಕ್ಷಾಶ್ರೀ, ಶ್ರೇಯ ಮತ್ತು ಶ್ರಾವ್ಯ ಹಾಗೂ ತರಬೇತುದಾರ ಜಸ್ವಂತ್ ಗೌಡ, ಟೀಮ್ ಮ್ಯಾನೇಜರ್ ಪ್ರಫುಲ್ಲ ಎ ಅವರು ವಿಮಾನಯಾನದ ಮೂಲಕ ಪಯಣಿಸಿದ್ದಾರೆ. ತಂಡಕ್ಕೆ ಕೇಶವ ಅಮೈ ಶುಭಹಾರೈಸಿ ಅವರನ್ನು ಬೀಳ್ಕೊಡಲಾಯಿತು.










