“ಅಕ್ಷಯ” ಏವಿಯೇಷನ್ ವಿಭಾಗದ ಮುಕುಟಕ್ಕೆ ಚಿನ್ನದ ಗರಿ: ಇಂಡಿಗೋ ಏರ್ಲೈನ್ಸ್, ಇಂಟರ್ನ್ಯಾಷನಲ್ ಏರ್ಪೋರ್ಟುಗಳಿಗೆ ವಿದ್ಯಾರ್ಥಿಗಳ ಆಯ್ಕೆ

0

ಪುತ್ತೂರು: ತನ್ನ ಅಂತಾರಾಷ್ಟ್ರೀಯ ಮಟ್ಟದ ಸಾಧನೆ, ಶಿಸ್ತು ಮತ್ತು ಪ್ರಗತಿಯಿಂದ ಎಲ್ಲರ ಮನ ಗೆದ್ದಿರುವ ಅಕ್ಷಯ ಕಾಲೇಜು- ಪುತ್ತೂರು ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿಯೇ ಪ್ರಪ್ರಥಮ ಬಾರಿಗೆ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಕೋರ್ಸನ್ನು ಪರಿಚಯಿಸಿ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶವನ್ನೊದಗಿಸಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕನಸನ್ನು ಸಾಕಾರಗೊಳಿಸಿದೆ. 

2021ರಲ್ಲಿ ಬಿ.ಕಾಂ ವಿತ್ ಏವಿಯೇಷನ್ ಪ್ರಾರಂಭಗೊಂಡು, ತನ್ನ ತೇರ್ಗಡೆ ಹೊಂದಿರುವ ಏವಿಯೇಷನ್ ವಿದ್ಯಾರ್ಥಿಗಳು ಇಂಟರ್ನ್ಯಾಷನಲ್ ಏರ್ಪೋರ್ಟುಗಳಲ್ಲಿ ಉದ್ಯೋಗ ಗಳಿಸಿಕೊಳ್ಳುವ ಮೂಲಕ ಸಂಸ್ಥೆಯ ಸಾಧನೆಗೆ ಸಾಕ್ಷಿಯಾಗಿದ್ದಾರೆ.

ಕ್ಷೇಮ-ರಾಯಲ್ ವಾಲ್ಟ್ರಾನ್ಸ್ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್, ಶ್ರಾವ್ಯ – ರಾಯಲ್ ವಾಲ್ಟ್ರಾನ್ಸ್ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್, ಸವಿ ದೇಚಮ್ಮ – ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್, ಟೀನಾ – ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್, ಅಂಜಲಿ – ಇಂಡಿಗೋ ಏರ್ಲೈನ್ಸ್, ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್, ಮೇಘಶ್ರೀ – ಇಂಡಿಗೋ ಏರ್ಲೈನ್ಸ್ – ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್, ವಿಸ್ಮಿತ – ಫಾಕ್ಸ್ಕಾನ್ ಕಂಪನಿ ಬೆಂಗಳೂರು, ರಿತೀಕ್ಷಾ – ಫಾಕ್ಸ್ಕಾನ್ ಕಂಪನಿ ಬೆಂಗಳೂರು, ವರ್ಷಿಣಿ – ಫಾಕ್ಸ್ಕಾನ್ ಕಂಪನಿ ಬೆಂಗಳೂರು, ಜೀವನ್ – ಮೆನ್ಜೀಸ್ ಏವಿಯೇಷನ್ ​​- ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟುಗಳಿಗೆ ವಿದ್ಯಾರ್ಥಿಗಳು ಆಯ್ಕೆಗೊಂಡು ಉದ್ಯೋಗದಲ್ಲಿದ್ದಾರೆ.

ಇಂದು ಅಕ್ಷಯ ಕಾಲೇಜು ಕೆರಿಯರ್ ಡೆಸ್ಟಿನಿ ಮೂಲಕ ನುರಿತ ಬೋಧಕ ವೃಂದದೊಡನೆ ಕೇವಲ ಬಿ.ಕಾಂ ಪದವಿಯೊಂದಿಗೆ ಮಾತ್ರವಲ್ಲದೆ ,ಬಿಸಿಎ, ಫ್ಯಾಷನ್ ಡಿಸೈನ್, ಇಂಟೀರಿಯರ್ ಡಿಸೈನ್ ಹಾಗೂ ವಿಶೇಷವಾಗಿ ಬಿ.ಎ ವಿತ್ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಮೂಲಕವೂ ವಿದ್ಯಾರ್ಥಿಗಳಿಗೆ ಮತ್ತಷ್ಟು ಅವಕಾಶ ಕಲ್ಪಿಸುತ್ತಿದೆ.ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ವಿಶೇಷ ವಿದ್ಯಾರ್ಥಿವೇತನವೂ ದೊರೆಯುತ್ತಿದೆ. ಹಾಗೆಯೇ, ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ.)ನ ಅಕ್ಷಯ ಕೆರಿಯರ್ ಅಕಾಡೆಮಿ ಹಾಗೂ ಕೆರಿಯರ್ ಡೆಸ್ಟಿನಿ, ಮಂಗಳೂರು ಜಂಟಿಯಾಗಿ ಯಾವುದೇ ಸಂಸ್ಥೆಯಲ್ಲಿ ಪದವಿ ಅಥವಾ ಪಿಯುಸಿ ಪೂರೈಸಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪುತ್ತೂರಿನ ದರ್ಬೆಯಲ್ಲಿ ಒಂದು ವರ್ಷದ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಕೋರ್ಸನ್ನು ಕೂಡ ಪ್ರಾರಂಭಿಸಿದ್ದು, ಹೆಚ್ಚಿನ ವಿದ್ಯಾರ್ಥಿಗಳಿಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಮುಂದಿನ 2026-27ನೇ ಶೈಕ್ಷಣಿಕ ಸಾಲಿನಿಂದ ಬಿಬಿಎ ಲಾಜಿಸ್ಟಿಕ್, ಬಿಬಿಎ ವಿತ್ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಪದವಿಯನ್ನು ಪ್ರಾರಂಭಿಸಲು ಚಿಂತಿಸಿದ್ದು, ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ ಒದಗಿ ಬರಲಿದೆ.

LEAVE A REPLY

Please enter your comment!
Please enter your name here