





ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿ ರಿಷಿ ಭಾರದ್ವಾಜ್ ಅವರು ಬೆಂಗಳೂರಿನ ಕಣಾದ ವಿಜ್ಞಾನ ಪತ್ರಿಕೆ ತನ್ನ 51ನೇ ವಾರ್ಷಿಕ ಸಂಚಿಕೆಯ ವತಿಯಿಂದ ಆಯೋಜಿಸಿದ ರಾಜ್ಯಮಟ್ಟದ ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆ 2025ರ ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.


’ಶಿಕ್ಷಣ ಹಾಗೂ ಮನೋರಂಜನೆಯಲ್ಲಿ ವರ್ಚುವಲ್ ರಿಯಾಲಿಟಿಯ ಸಾಮರ್ಥ್ಯ’ ಎಂಬ ವಿಷಯದಲ್ಲಿ ಪ್ರಬಂಧ ರಚಿಸಿದ ರಿಷಿ ಭಾರದ್ವಾಜ್ ಅವರು ಪುತ್ತೂರು ನರಿಮೊಗರಿನ ಸುರೇಶ ಎಸ್ ಬಿ ಮತ್ತು ಉಷಾ ಪಾರ್ವತಿ ಎಂ ದಂಪತಿಯ ಪುತ್ರ.
ಮೈಸೂರಿನ ನಟರಾಜ ನೃತ್ಯ ಮತ್ತು ಸಂಗೀತ ಅಕಾಡೆಮಿ ವತಿಯಿಂದ ದಸರಾ ಪ್ರಯುಕ್ತ ಆಯೋಜಿಸಿದ ಅಖಿಲ ಭಾರತೀಯ ಡ್ಯಾನ್ಸ್ ಒಲಿಂಪಿಯಾಡ್ನಲ್ಲಿ ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶಮಾ ವಿ. ಯಂ. ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಕಾಸರಗೋಡಿನ ಉಲ್ಲೋಡಿಯ ಮಹೇಶ್ ಕುಮಾರ್ ವಿ ಮತ್ತು ದುರ್ಗಾ ಶಾಲಿನಿ ಬಿ ದಂಪತಿ ಪುತ್ರಿ.















