





ಪುತ್ತೂರು: ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪುತ್ತೂರು ಇದರ ತಿಂಗಳ ಕಾರ್ಯಕ್ರಮ ‘ಬಣ್ಣದಜ್ಜನ ಸ್ಮೃತಿ ಯಾನ’ ದ 11ನೇ ಸಂಚಿಕೆ ಬನ್ನದ ಮಹಾಲಿಂಗ ಸಂಸ್ಮರಣೆ, ಯಕ್ಷಸ್ಮೃತಿ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನ.12ರಂದು ಪಟ್ಟೆ ನಿವೃತ್ತ ಯೋಧ ವಿದ್ಯಾಧರ ಎನ್ ಅವರ ನಿವಾಸದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಯಕ್ಷ ಕಲಾವಿದ ಜಯರಾಮ ಪಾಟಾಳಿ ಪಡುಮಲೆರವರ ಅಭಿನಂದನಾ ಭಾಷಣ ಮಾಡಿದ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತೊಟ್ಟಿ ಇವರು ಮಾತನಾಡಿ, ಜಯರಾಮ ಪಾಟಾಳಿ ಅವರು ಅವರು ಕೇವಲ ಯಕ್ಷಗಾನ ಕಲಾವಿದರಲ್ಲ. ಯಕ್ಷ ಗುರುಗಳೂ ಹೌದು. ತಮ್ಮ ಕಲೆಯನ್ನು ಮಕ್ಕಳಿಗೂ ಹಂಚಿ ಮುಂದಿನ ಪೀಳಿಗೆಗೆ ಯಕ್ಷಗಾನವನ್ನು ಹಸ್ತಾಂತರಿಸುವ ಅವಿಸ್ಮರಣೀಯ ಕಾರ್ಯವನ್ನು ಮಾಡುತ್ತಿದ್ದಾರೆ. ಕರಾವಳಿ ಹಾಗೂ ಕಾಸರಗೋಡಿಗೆ ಮಾತ್ರ ಸೀಮಿತವಾಗಿದ್ದ ಯಕ್ಷಗಾನವನ್ನು ಕೇರಳದ ಎಲ್ಲಾ ಜಿಲ್ಲೆಗಳಲ್ಲಿ ನಡೆಯುವ ವಾರ್ಷಿಕ ಕಲೋತ್ಸವದಲ್ಲಿ ಒಂದು ಸ್ಪರ್ಧಾ ವಿಷಯವಾಗಿ ಮಾರ್ಪಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂತಹ ಸಾಧಕರಿಗೆ ಬಣ್ಣದ ಮಹಾಲಿಂಗರ ಯಕ್ಷ ಸ್ಮೃತಿ ಪುರಸ್ಕಾರಕ್ಕೆ ಭಾಜನರಾಗಿರುವುದು ನೀಡುತ್ತಿರುವುದು ನಮಗೆ ಹೆಮ್ಮೆ ಎಂದರು.






ಸಂಸ್ಮರಣಾ ಭಾಷಣ ಮಾಡಿದ ನಿವೃತ್ತ ಮುಖ್ಯೋಪಾಧ್ಯಾಯರು, ಯಕ್ಷಗಾನ ಕಲಾವಿದರಾದಗಿರುವ ರಾಮಣ್ಣ ಮಾಸ್ತರ್ ದೇಲಂಪಾಡಿ ಮಾತನಾಡಿ, ಮಹಾಲಿಂಗರವರು ಬಾಲ್ಯ ಕಾಲದಿಂದಲೂ ಯಕ್ಷಗಾನದಲ್ಲಿ ಬೆಳೆದು ಬಂದವರು. ಕಡುಬಡತನದಲ್ಲಿ ಅತ್ಯಂತ ಸರಳ ಜೀವನ ಸಾಗಿಸಿದ ಓರ್ವ ಅಪ್ರತಿಮ ಕಲಾವಿದರಾಗಿದ್ದರು. ಯಕ್ಷಗಾನದಲ್ಲಿ ಸ್ತ್ರೀವೇಷ ಸಹಿತವಾಗಿ ಎಲ್ಲಾ ರೀತಿವ ವೇಷಗಳನ್ನು ನಿಭಾಯಿಸಿದ ಅವರು ಬಣ್ಣದ ವೇಷಕ್ಕೆ ಹೊಸ ಆಯಾಮ ನೀಡಿದ ಕೆಲವೇ ಕೆಲವು ಮಹಾವೇಷಧಾರಿಗಳಲ್ಲಿ ಒಬ್ಬರಾಗಿದ್ದರು ಎಂದರು.
ಯಕ್ಷ ಸ್ಮೃತಿ ಪುರಸ್ಕಾರ ಗೌರವ ಸ್ವೀಕರಿಸಿದ ಜಯರಾಮ ಪಾಟಾಳಿ ಪಡುಮಲೆ ಅನಿಸಿಕೆಗಳನ್ನು ವ್ಯಕ್ತಪಡಿಸಿಸರು. ಪೆರ್ಣೇ ಶ್ರೀ ಭಗವತಿ ಕ್ಷೇತ್ರದ ಸಮುದಾಯ ಬಾಂದವರ ಕೋಮರ ಅಚ್ಚನ್ ಮಾರ್ಜಂಡಡ್ಕ್ ಕಾರ್ಣವರ್, ಕಾರ್ಯಕ್ರಮದ ಪ್ರಾಯೋಜಕ, ನಿವೃತ್ತ ಯೋಧ ವಿದ್ಯಾದರ ಎನ್ ಪಟ್ಟೆ ಅವರ ಪತ್ನಿ ಸುನೀತಾ ವಿದ್ಯಾಧರ, ನಿವೃತ್ತ ಯೋಧ ಬಾಲಕೃಷ್ಣ ಪಟ್ಟೆ ಹಾಗೂ ಅವರ ತಾಯಿ ಗಿರಿಜಾ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸತ್ಯನಾರಾಯಣ ಕುಡುಂಬಿಲ ಪ್ರಾರ್ಥಿಸಿದರು. ನಿವೃತ್ತ ಯೋಧ ಸುಬ್ಬಪ್ಪ ಪಟ್ಟೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಗೀತಾ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ‘ಭೀಷ್ಮ ಸೇನಾಧಿಪತ್ಯ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೆಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು, ಮನೋಹರ್ ಬಲ್ಲಾಳ್ ಅಡ್ವಾಳ, ಚೆಂಡೆಯಲ್ಲಿ ವಿಷ್ಣು ಶರಣ ಬನಾರಿ, ಮದ್ದಳೆಯಲ್ಲಿ ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ, ಚಕ್ರತಾಳದಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ಅರ್ಥಧಾರಿಗಳಾಗಿ ನಾರಾಯಣ ದೇಲಂಪಾಡಿ, ರಾಮಣ್ಣ ನಾಯ್ಕ್ ದೇಲಂಪಾಡಿ, ಜಯರಾಮ ಪಾಟಾಳಿ ಪಡುಮಲೆ, ಗೋಪಾಲಕೃಷ್ಣ ಮಾಸ್ತರ್ ಪಂಜತೊಟ್ಟಿ, ರಾಮಣ್ಣ ಮಾಸ್ತರ್ ದೇಲಂಪಾಡಿ, ರಮಾನಂದ ರೈ ರವರು ಸಭಿಕರನ್ನು ಯಕ್ಷಲೋಕಕ್ಕೆ ಕೊಂಡೊಯ್ದರು.








