





ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಪದವಿ ಕಾಲೇಜು ಕುಂಬ್ರ ಇಕಾಕ್ ಸೆಲ್ ವತಿಯಿಂದ ಓಲ್ಡ್ ಏಜ್ ಹೋಂ ವಿಸಿಟ್ ಭಾಗವಾಗಿ ಮುಕ್ರುಂಪಾಡಿ ಆನಂದಾಶ್ರಮಕ್ಕೆ ವಿದ್ಯಾರ್ಥಿನಿಯರು ಭೇಟಿ ನೀಡಿದರು.



ಆಶ್ರಮದಲ್ಲಿನ ಬದುಕು, ಜೀವನ ಶೈಲಿ ಬಗ್ಗೆ ವಿದ್ಯಾರ್ಥಿನಿಯರು ಮಾಹಿತಿ ಪಡೆದುಕೊಂಡರು. ಬಳಿಕ ಹಣ್ಣುಹಂಪಲುಗಳನ್ನು ವಿತರಿಸಿದರು. ಪದವಿ ವಿಭಾಗದ ಇಂಗ್ಲೀಷ್ ಉಪನ್ಯಾಸಕಿ ಕೃಷ್ಣವೇಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸದರು. ಪ್ರಾಂಶುಪಾಲ ಮಹಮ್ನದ್ ಮನ್ಸೂರ್, ಆನಂದಾಶ್ರಮದ ಮೇಲ್ವಿಚಾರಕ ಸದಾಶಿವ ಪೈ ಉಪಸ್ಥಿತರಿದ್ದರು. ಪ್ರಥಮ ಬಿ.ಕಾಂ ವಿಭಾಗದ ಹಸ್ನಾ ಅವರು ತಾಯಿಯ ಮಹತ್ವವನ್ನು ಸಾರುವ ಭಾವಗೀತೆಯನ್ನು ಹಾಡಿದರು.













