ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಹಕಾರ ಸಪ್ತಾಹ

0

ಪುತ್ತೂರು : 72ನೇ ಅಖಿಲ ಭಾರತ ಸಹಕಾರ ಸಪ್ತಾಹವು ದಿನಾಂಕ ನ. 14 ರಿಂದ 21 ರತನಕ ಯಶಸ್ವಿಯಾಗಿ ಆಚರಿಸಲು ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಅದರ ಅಂಗವಾಗಿ ನ. 14ರಂದು ಮುಕ್ಕೂರುಹಾಲು ಉತ್ಪಾದಕರ ಸಂಘದಲ್ಲಿಧ್ವಜಾರೋಹಣವನ್ನು ನೆರವೇರಿಸಲಾಯಿತು. ನರಸಿಂಹ ತೇಜಸ್ವಿ ಕಾನಾವು ಧ್ವಜಾರೋಹಣ ಮಾಡಿದರು.ಸಂಘದ ಕಾರ್ಯದರ್ಶಿ ಮಾಲತಿ ಅವರು ಸ್ವಾಗತಿಸಿದರು.

ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಅವರು ಸಹಕಾರ ಸಪ್ತಾಹದ ಉದ್ದೇಶದ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.ಸಂಘದ ನಿರ್ದೇಶಕರುಗಳಾದ ಗುಡ್ಡಪ್ಪ ಗೌಡ ಅಡ್ಯತಕಂಡ, ದಯಾನಂದ ರೈ ಕನ್ನೆಜಾಲು ಹಾಗೂ ಲಿಂಗಪ್ಪ ಗೌಡ ಕುಂಡಡ್ಕ, ಜನಾರ್ದನ ಗೌಡ ಕಂಡಿಪ್ಪಾಡಿ, ನಿಶ್ಚಲ್ ಕುಂಜಾಡಿ, ಸಂದೀಪ್ ಕುಂಜಾಡಿ,ಸ್ವರೂಪ್ ಕಾಪು,ಕೊರಗ್ಗು, ಬಾಲಕೃಷ್ಣ, ರವಿಕಿರಣ್, ಹಾಲುಪರೀಕ್ಷಕಿ ಲಲಿತರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here