ಕೆಂಪು ಕಲ್ಲು ಗಣಿಗಾರಿಕೆಗೆ ಅರ್ಜಿ ಹಾಕಿದವರಿಗೆ ತಕ್ಷಣ ಲೈಸನ್ಸ್ ಮಂಜೂರು ಮಾಡಿ:ಶಾಸಕ ಅಶೋಕ್ ರೈ ಆಗ್ರಹ

0

ಮಂಗಳೂರು: ಕೆಂಪು ಕಲ್ಲು ಗಣಿಗಾರಿಕೆಯ ಬಗೆಗಿನ ಗೊಂದಲಕ್ಕೆ ಸರಕಾರ ಪರಿಹಾರವನ್ನು ನೀಡಿದೆ, ಈಗ ಎಲ್ಲಾ ಕಡೆಗಳಲ್ಲಿ ಕಲ್ಲು ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ. ಪರವಾನಗಿ ಹೊಂದಿರುವವರು ಈಗಾಗಲೇ ಗಣಿಗಾರಿಕೆ ಆರಂಭ ಮಾಡಿದ್ದಾರೆ. ಈಗ ಎಲ್ಲೂ ಕಲ್ಲಿನ ಕೊರತೆ ಇಲ್ಲ ಆದರೆ ಗಣಿಗಾರಿಕೆಗೆ ಪರವಾನಿಗೆ ಕೋರಿ ಅರ್ಜಿ ಹಾಕಿದವರಿಗೆ ತಕ್ಷಣ ಪರವಾನಿಗೆ ನೀಡಿ ಎಂದು ಪುತ್ತೂರು ಶಾಸಕ ಅಶೋಕ್ ರೈ ಕೆಡಿಪಿ ಸಭೆಯಲ್ಲಿ ಆಗ್ರಹ ಮಾಡಿದರು. ಸಭೆಯು ಜಿ.ಪಂ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ಕಲ್ಲು ಗಣಿಗಾರಿಕೆ ವಿಚಾರ ಬಂದಾಗ ಸಭೆಯ ಗಮನ ಸೆಳೆದ ಶಾಸಕರು, ಈಗಾಗಲೇ 16 ಅರ್ಜಿಗಳು ಬಾಕಿ ಇದೆ ಎಂಬ ಮಾಹಿತಿ ಇದೆ. ಬಾಕಿ ಇರುವ ಅರ್ಜಿದಾರರಿಗೆ ಕೂಡಲೇ ಲೈಸೆನ್ಸ್ ಮಂಜೂರು‌ ಮಾಡಿ ಎಂದು ಆಗ್ರಹಿಸಿದರು. 10 ದಿನದೊಳಗೆ ಲೈಸೆನ್ಸ್ ಮಂಜೂರು ಮಾಡುವಂತೆ ಸಚಿವರು ಸೂಚನೆ ನೀಡಿದರು.


ಕಲ್ಲು ಗಣಿಗಾರಿಕೆ ಗೆ ಸರಕಾರ ಪರವಾನಗಿ ನೀಡಿದರೂ ಕಲ್ಲುಗಳು ದಾರಾಳವಾಗಿ ಸಾಗಾಟವಾಗುತ್ತಿದ್ದರೂ ಕಲ್ಲಿನ ಬೆಲೆ ಕಡಿಮೆಯಾಗಿಲ್ಲ. ಸದ್ಯ ಒಂದು ಕಲ್ಲಿಗೆ 40 ರಿಂದ 45 ದರ ಪಡೆಯುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕಾದರೆ ಜಿಲ್ಲಾಡಳಿತ ಕಲ್ಲು ಗಣಿಗಾರಿಕೆಗೆ ಪರವಾನಿಗೆ ಹೆಚ್ಚಿಸಬೇಕು ಎಂದು ಶಾಸಕರು ಅಭಿಪ್ರಯಿಸಿದರು.

LEAVE A REPLY

Please enter your comment!
Please enter your name here