ಸೌತಡ್ಕ: ಆನೆದಾಳಿಗೆ ಮೃತಪಟ್ಟ ಬಾಲಕೃಷ್ಣ ಶೆಟ್ಟಿಯವರ ಪುತ್ರಿಗೆ ಐಟಿ ಕಂಪನಿಯಲ್ಲಿ ಉದ್ಯೋಗ-ರಕ್ಷಿತ್ ಶಿವರಾಂ ಶಿಫಾರಸು

0

ನೆಲ್ಯಾಡಿ: ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದಲ್ಲಿ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದ ಸುಜಾತ ಶೆಟ್ಟಿಯವರ ಪತಿ, ಸೌತಡ್ಕ ನಿವಾಸಿ ಬಾಲಕೃಷ್ಣ ಶೆಟ್ಟಿ ಅವರು ಇತ್ತೀಚೆಗೆ ಆನೆ ದಾಳಿಯಿಂದ ಮೃತಪಟ್ಟಿದ್ದು, ಈ ವೇಳೆ ಮೃತರ ಮನೆಗೆ ಭೇಟಿ ನೀಡಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಗೆ ಮೃತ ಬಾಲಕೃಷ್ಣ ಶೆಟ್ಟಿಯವರ ಪುತ್ರಿ ವೇದಿತ ಅವರಿಗೆ ಉದ್ಯೋಗ ಮತ್ತು ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಮನೆಯವರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದರು.

ಇದೀಗ ಈ ಮನವಿಗೆ ಸ್ಪಂದಿಸಿದ ರಕ್ಷಿತ್ ಶಿವರಾಂರವರು ಬೆಂಗಳೂರಿನ ಪ್ರಸಿದ್ಧ ಐಟಿ ಕಂಪನಿಯಲ್ಲಿ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ನ.17ರಂದು ಉದ್ಯೋಗಕ್ಕೆ ಹಾಜರಾಗುವಂತೆ ವೇದಿತ ಅವರಿಗೆ ಐಟಿ ಕಂಪನಿ ಆದೇಶ ನೀಡಿದೆ. ಅರಣ್ಯ ಇಲಾಖೆಯಿಂದಲೂ ಪರಿಹಾರವಾಗಿ ರೂ. 20ಲಕ್ಷ ಮಂಜೂರಾತಿಗೊಳಿಸುವಲ್ಲಿಯೂ ಸಕ್ರಿಯ ಪಾತ್ರ ವಹಿಸಿ, ಪರಿಹಾರ ಒದಗಿಸಿದ ಮತ್ತು ಉದ್ಯೋಗವನ್ನು ದೊರಕಿಸಿಕೊಟ್ಟ ರಕ್ಷಿತ್ ಶಿವರಾಂ ಅವರಿಗೆ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಕೃತಜ್ಞತೆಗಳು ಎಂದು ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here