





ಕಾಣಿಯೂರು: ಸ.ಹಿ.ಪ್ರಾ.ಶಾಲೆ, ಬೊಬ್ಬೆಕೇರಿಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಸರಕಾರದ ಆದೇಶದಂತೆ ಪೋಷಕ-ಶಿಕ್ಷಕ ಮಹಾಸಭೆಯನ್ನು ಆಯೋಜಿಸಲಾಯಿತು.



ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಎಸ್.ಡಿಎಂಸಿ ಅಧ್ಯಕ್ಷರಾದ ಸುನಿತಾ ಗಣೇಶ್ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ , ಎಸ್ ಡಿ ಎಂ ಸಿ ಉಪಾಧ್ಯಕ್ಷ ರಮೇಶ್ ಉಪ್ಪಡ್ಕ, ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ, ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಸುಕುಮಾರ್ ಕಲ್ಪಡ, ಕಾರ್ಯದರ್ಶಿ ಅಶ್ವಿನ್ ಕರಿಮಜಲು, ಪಂಚಾಯತ್ ಸದಸ್ಯೆ ಸುನಂದಾ ಅಬ್ಬಡ ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ನಂತರ ಪೋಷಕರಿಗೆ ಮಕ್ಕಳ ರಕ್ಷಣೆ, ಸರ್ಕಾರಿ ಶಾಲೆಯ ಮಹತ್ವ, ಎಲ್.ಬಿ.ಎ ಮೌಲ್ಯಾಂಕನ, ಪೋಕ್ಸೋ ಖಾಯಿದೆ ಬಗ್ಗೆ ಮಾಹಿತಿ ನೀಡಲಾಯಿತು. ಕಡಬ ಸರ್ಕಾರಿ ಆಸ್ಪತ್ರೆಯಿಂದ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕಿ ಶ್ವೇತ ಇವರು ಪೋಕ್ಸೋ ಕಾಯಿದೆಯ ಕುರಿತು ಮಾಹಿತಿ ನೀಡಿದರು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರದ ಕುರಿತು ಪಿ.ಪಿ.ಟಿ. ತೋರ್ಪಡಿಸುವ ಮೂಲಕ ಪೋಷಕರಿಗೆ ಮನವರಿಕೆ ಮಾಡಲಾಯಿತು. ಅಲ್ಲದೆ ಇದೆ ದಿನ ಶಾಲೆಯಲ್ಲಿ ಪುತ್ತೂರು ಅಂಚೆ ಇಲಾಖೆಯ ಸಹಯೋಗದೊಂದಿಗೆ ಬ್ರಹತ್ ಆಧಾರ್ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಂಚೆ ಇಲಾಖೆಯ ವಿವಿಧ ಸವತ್ತುಗಳ ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಶಿಕ್ಷಕ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು.












