





ನೆಲ್ಯಾಡಿ: ಗೋಳಿತ್ತಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆದ ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯ ಹಿರಿಯ ವಿಭಾಗದಲ್ಲಿ ಉಜಿರೆ ಎಸ್.ಡಿ.ಎಂ ಎಜುಕೇಶನ್ ಸೊಸೈಟಿಯ ಆಡಳಿತಕ್ಕೂಳಪಟ್ಟ ಕಾಂಚನ ಶ್ರೀ ಲಕ್ಷ್ಮೀ ನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ ಲಭಿಸಿದೆ.


ಹಿರಿಯ ವಿಭಾಗದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಖುಷಿ ಜೆ.ಎಸ್.7ನೇ-ದೇಶಭಕ್ತಿ ಗೀತೆ ಪ್ರಥಮ, ಕಥೆ ಹೇಳುವುದು ಪ್ರಥಮ, ಮನಸ್ವಿ ಕೆ.ಎಂ.7ನೇ-ಕವನ ವಾಚನ ಪ್ರಥಮ, ಇಂಗ್ಲಿಷ್ ಕಂಠಪಾಠ ತೃತೀಯ, ಶ್ರಾವ್ಯ 6ನೇ-ಸಂಸ್ಕೃತ ಧಾರ್ಮಿಕ ಪಠಣ ದ್ವಿತೀಯ, ದೃತಿ ಎನ್.೬ನೇ-ಕನ್ನಡ ಕಂಠಪಾಠ ತೃತೀಯ, ರೂಪಶ್ರೀ 7ನೇ-ಚಿತ್ರಕಲೆ ತೃತೀಯ, ದೀಕ್ಷಾ ಡಿ.6ನೇ-
ಹಿಂದಿ ಕಂಠಪಾಠ ತೃತೀಯ, ಅನ್ವಿತ್ ಡಿ.ಎಸ್ 6ನೇ-ಕ್ಲೇ ಮಾಡೆಲಿಂಗ್ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.





ಕಿರಿಯ ವಿಭಾಗದಲ್ಲಿ ರಜತ್ ಕೆ.ಎಂ 3ನೇ- ಕ್ಲೇ ಮಾಡೆಲಿಂಗ್ ಪ್ರಥಮ, ತರುಣ್ 4ನೇ- ಆಶುಭಾಷಣ ದ್ವಿತೀಯ, ದಿಶಾಂತ್ 4ನೇ-ಛದ್ಮವೇಷ ತೃತೀಯ, ಅಶ್ವಿತಾ ಕೆ 4ನೇ- ಕಥೆ ಹೇಳುವುದು ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಶಾಲೆಯ 20 ವಿದ್ಯಾರ್ಥಿಗಳು ಭಾಗವಹಿಸಿದ್ದರು.






