ಸಂಜಯನಗರ ಶಾಲಾ ಅಭಿವೃದ್ಧಿಯ ಹೆಜ್ಜೆಯ ಪೂರ್ವಭಾವಿ ಸಭೆ

0

‘ಊರಿನವರು ಶಾಲೆಯ ಜೊತೆ ಕೈಜೋಡಿಸಿದಾಗ ಶಾಲೆಯ ಅಭಿವೃದ್ಧಿ ಸಾಧ್ಯ’ – ಆನಂದ ಉಡುಪ

ಪುತ್ತೂರು: ಊರಿನವರು ಶಾಲೆಯ ಜೊತೆ ಕೈಜೋಡಿಸಿದಾಗ ಶಾಲೆಯ ಅಭಿವೃದ್ಧಿ ಸಾಧ್ಯ ಎಂದು ಊರಿನ ಹಿರಿಯರಾದ ಆನಂದ ಉಡುಪ ಇವರು ಹೇಳಿದರು. ಅವರು ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ದಕ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಜಯ ನಗರ ಇದರ ವತಿಯಿಂದ ನಡೆದ ಶಾಲೆಯ ಅಭಿವೃದ್ಧಿಯ ಹೆಜ್ಜೆಯ ಪೂರ್ವಭಾವಿ ಸಭೆಯ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಊರ ಶಾಲೆ ಉದ್ಧಾರವಾಗಬೇಕಾದರೆ ಊರಿನವರಿಗೆ ನಮ್ಮ ಶಾಲೆ ಎಂಬ ಹೆಮ್ಮೆ ಮೂಡಬೇಕು. ಶಾಲೆಯ ಬಗ್ಗೆ ಅಭಿಮಾನ ಮೂಡುವಂತೆ ಪೋಷಕರ ಮನವೊ ಲಿಸಬೇಕು ಎಂದು ಅವರು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಗುರುಗಳಾದ ರಮೇಶ್ ಉಳಯ ಇವರು ಮಾತನಾಡಿ 1990 ರಲ್ಲಿ ಆರಂಭಗೊಂಡ ಈ ಶಾಲೆಗೆ ಈಗ 35 ವರ್ಷಗಳು ತುಂಬಿವೆ. ಪಳಿಕೆ ಸಂಜಯನಗರ, ಮರಿಲ್, ಕೂರ್ನಡ್ಕ, ಬೆದ್ರಾಳ ಈ ಪ್ರದೇಶಗಳಿಗೆ ಇದೊಂದೇ ಸರಕಾರಿ ಕನ್ನಡ ಶಾಲೆಯಾಗಿದ್ದು ಇದನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಇದೆ ಎಂದರು. ಇದಕ್ಕಾಗಿ ಊರಿನವರನ್ನು ಒಟ್ಟು ಸೇರಿಸುವ ನೆಲೆಯಲ್ಲಿ ಈ ಸಭೆಯನ್ನು ಕರೆದಿದ್ದು ಊರದಾನಿಗಳನ್ನು ಒಟ್ಟು ಸೇರಿಸಿ ಶಾಲೆಯ ಅಭಿವೃದ್ಧಿಯನ್ನು ಮಾಡಬೇಕು ಎಂದರು.


ಸಭೆಯಲ್ಲಿ ಶಾಲೆಯಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚು ಮಾಡುವ ಕುರಿತು ಚರ್ಚಿಸಲಾಗಿ, ಶಾಲೆ ಆಕರ್ಷಣೆ ವಾದಾಗ ಮಾತ್ರ ಮಕ್ಕಳು ಶಾಲೆಗೆ ಸೇರುತ್ತಾರೆ ಆದ್ದರಿಂದ ಶಾಲೆಯನ್ನು ಆಕರ್ಷಣೆಗೊಳಿಸಬೇಕು ಎನ್ನುವ ಚರ್ಚೆಗಳಾದವು. ಶಾಲೆಗೆ ಕಂಪ್ಯೂಟರ್ ಮತ್ತು ಪ್ರಿಂಟರ್ ವ್ಯವಸ್ಥೆ, ಶಾಲೆಗೆ ಸುಸಜ್ಜಿತವಾದ ಕೈ ತೊಳೆಯುವ ವ್ಯವಸ್ಥೆ, ಶಾಲಾ ಶೌಚಾಲಯಕ್ಕೆ ಟೈಲ್ಸ್ ಹಾಗೂ ಶೀಟ್ ಅಳವಡಿಸುವ ಕಾರ್ಯ, ಶಾಲಾ ಕಟ್ಟಡದ ದುರಸ್ಥಿ ಮತ್ತು ಪೇಂಟಿಂಗ್, ಶಾಲಾ ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ,ಶಾಲೆಗೆ ಆವರಣ ಗೋಡೆ, ಶಾಲಾ ಕೈತೋಟ ರಚನೆ, ಶಾಲಾ ಆಟದ ಮೈದಾನದ ದುರಸ್ತಿ, ಇತ್ಯಾದಿಗಳ ಬಗ್ಗೆ ಚರ್ಚಿಸಲಾಗಿ ಈ ಬಗ್ಗೆ ಒಂದೊಂದೇ ಕಾರ್ಯವನ್ನು ನಡೆಸಲು ದಾನಿಗಳ ಸಹಕಾರವನ್ನು ಪಡೆಯುವುದಾಗಿ ನಿರ್ಣಯಿಸಲಾಯಿತು. ಹೆಚ್ಚಿನ ಅನುದಾನಕ್ಕಾಗಿ ಕ್ಯಾಂಪ್ಕೋ, ಎಂಆರ್‌ಪಿಎಲ್, ಕೆನರಾ ಬ್ಯಾಂಕ್ ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಕಳಿಸುವುದರ ಬಗ್ಗೆ ಚರ್ಚಿಸಲಾಯಿತು. ಶಾಸಕರನ್ನು ಭೇಟಿಯಾಗಿ ಅವರ ನಿರ್ದೇಶನದಂತೆ ಮುಂದಿನ ಕಾರ್ಯಗಳನ್ನು ನಡೆಸುದೆಂದು ಚರ್ಚಿಸಲಾಯಿತು.


ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಶುಭ ಹಾರೈಸಿದರು. ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ರಾಜೇಶ್ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ ಕ್ಯಾಂಟೀನ್ ಇದರ ಮಾಲೀಕರಾದ ರಾಜೇಂದ್ರ ಜೈನ್, ಶಾಲಾ ಎಸ್ ಡಿ ಎಂ ಸಿ ಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಲತಾ ಆನಂದ ಪೂಜಾರಿ, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಎಸ್ ಡಿ ಎಮ್ ಸಿ ಯ ಉಪಾಧ್ಯಕ್ಷರಾದ ಪುಷ್ಪಲತಾ ಉಮೇಶ್, ಸದಸ್ಯರಾದ ಕಮರುದ್ದೀನ್ ಸಂಜಯ ನಗರ, ವಿನೋಜ್ ಪೂಜಾರಿ ಮರೀಲ್, ಸಾವಿತ್ರಿ ವಿನೋಜ್ ಪೂಜಾರಿ ಮರಿಲ್, ಮಮತಾ ಹರೀಶ್ ಪಳಿಕೆ, ಸುಮತಿ ಪಳಿಕೆ, ವಸಂತಿ ರಮೇಶ್ ಪೂಜಾರಿ ಮರಿಲ್, ನಸೀಮಾ ಜೈನುದ್ದೀನ್ ಸಂಜಯನಗರ, ಆಯಿಷಾ ಖಾದರ್ ಸಂಜಯನಗರ, ಅನಿಶಾ ಮಹಮ್ಮದ್ ಹನೀಫ್ ಸಂಜಯನಗರ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಶ್ವಿತಾ, ಕಾರ್ಯದರ್ಶಿ ದೀಪ್ತಿ, ದೀಪಿಕಾ ಪಳಿಕೆ, ಊರಿನ ಹಿರಿಯರಾದ ಕಲ್ಯಾಣಿ ಸಂಜಯ ನಗರ, ಸುನಂದ ಸಂಜನಗರ, ಸಫಿಯಾ ಸಂಜಯನಗರ, ನೇಬಿಸಾ ಸಂಜಯನಗರ, ಜೋಹರ ಸಂಜಯನಗರ, ಕರುಣಾಕರ ಪೂಜಾರಿ ಸಂಜಯನಗರ, ಸೇರಿದಂತೆ ಶಾಲೆಯ ಪೋಷಕರು, ಊರಿನ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಶಾಲಾ ಹಿರಿಯ ಶಿಕ್ಷಕಿ ಸ್ಮಿತಾಶ್ರೀ ದಿನೇಶ್, ಅತಿಥಿ ಶಿಕ್ಷಕಿ ಸೌಮ್ಯ ಬಾಲಕೃಷ್ಣ, ದಿವ್ಯ ರಘುರಾಮ ಮುಂತಾದವರು ಸಹಕರಿಸಿದರು.

LEAVE A REPLY

Please enter your comment!
Please enter your name here