ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ – 2025

0

ಪುತ್ತೂರು:ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ – 2025 ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನ.15ರಂದು ನಡೆಯಿತು. ನ.15-18ರವರೆಗೆ ವರೆಗೆ ವಿವಿಧ ವಿಷಯಗಳ ಪುಸ್ತಕ ಪ್ರದರ್ಶನ ನಡೆಯಿತು.

ಉಕ್ಕಿನಡ್ಕ ವಷಿಷ್ಟಾಶ್ರಮ ಶಾಲೆಯ ಸಂಚಾಲಕ ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯ ಪಿ ಜಿ ಶಂಕರನಾರಾಯಣ ಭಟ್ ಉದ್ಘಾಟಿಸಿ, ವಿದ್ಯಾರ್ಥಿಗಳು ನಿರಂತರ ಕಲಿಯುವಿಕೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಹೊಸ ಹೊಸ ಪುಸ್ತಕಗಳನ್ನು ಪರಿಚಯಿಸಲು ಪುಸ್ತಕ ಪ್ರದರ್ಶನ ಉಪಯುಕ್ತವಾಗಿದೆ. ಕಾಲೇಜಿನಲ್ಲಿ ನಡೆಯುವ ಪುಸ್ತಕ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಭಾಗಿಗಳಾಗುವುದರ ಮೂಲಕ ಪ್ರಯೋಜನ ಪಡೆದುಕೊಳ್ಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ದಾಮೋದರ ಕಣಜಾಲು ವಹಿಸಿ ಪುಸ್ತಕದ ಮಹತ್ವವನ್ನು ತಿಳಿ ಹೇಳಿ ಪುಸ್ತಕದ ಓದಿನಿಂದ ಯಾರೂ ಸೋತ ಉದಾಹರಣೆಗಳಿಲ್ಲ ಆದರೆ ಓದದೇ ಸೋತವರು ಬಹಳಷ್ಟು ಎಂಬುದಾಗಿ ಕಿವಿ ಮಾತು ಹೇಳಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ ಮಾತನಾಡಿ, ವಿದ್ಯಾರ್ಥಿಗಳು ಈ ಪುಸ್ತಕ ಪ್ರದರ್ಶನ ದಿಂದ ಹೊಸ ಹೊಸ ಪುಸ್ತಕದ ಪರಿಚಯ ಮಾಡಿಕೊಂಡು ಓದುವ ಕಡೆಗೆ ನಿಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಿ ಎಂಬುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು. ಪ್ರಥಮ ಬಿಕಾಂ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಗ್ರಂಥಪಾಲಕ ಶ್ರೀ ರಾಮ ಕೆ ಪ್ರಸ್ತಾವಿಕ ನುಡಿಗಳನ್ನಾಡಿ,ಸ್ವಾಗತಿಸಿದರು. ನ.19,20ರಂದು ರಂದು ಕಾಲೇಜ್ ಡಿಜಿಟಲ್ ಲೈಬ್ರರಿ, ನ್ಯಾಷನಲ್ ಡಿಜಿಟಲ್ ಲೈಬ್ರರಿ ಮತ್ತು “ONE INDIA ONE SUBSCRIPTION” ವಿಷಯದಲ್ಲಿ ಮಾಹಿತಿ ಕಾರ್ಯಾಗಾರವು ನಡೆಯಲಿದೆ.

LEAVE A REPLY

Please enter your comment!
Please enter your name here