





ಪುತ್ತೂರು: ಚಿಕ್ಕಮೂಡ್ನೂರು ಗ್ರಾಮದ ಬೀರಿಗದಲ್ಲಿ ಗ್ರಾಮಿಣ ಕ್ರೀಡಾಕೂಟ ನಡೆಯಿತು.


ಗ್ರಾಮ ಪಂಚಾಯತ್ ಬನ್ನೂರು, ಮಾದರಿ ಗ್ರಾಮ ವಿಕಾಸ ಕೇಂದ್ರ, ಅಂಗನವಾಡಿ ಕೇಂದ್ರ ಬೀರಿಗ ಶ್ರೀಲಕ್ಷ್ಮೀ ಸ್ವಸಹಾಯ ಸಂಘಗಳ ಒಕ್ಕೂಟ ಚಿಕ್ಕಮೂಡ್ನೂರು, ಜನ ಶಿಕ್ಷಣ ಟ್ರಸ್ಟ್ (ರಿ) ಹಾಗೂ ಯುವಶಕ್ತಿ ಹಿರಿಯ ವಿದ್ಯಾಥಿ೯ ಸಂಘ ಮತ್ತು ಪ್ರೇರಣಾ ಕಿಶೋರಿಯರ ಸಂಘ ಬೀರಿಗ ಇವರುಗಳ ನೇತೃತ್ವದಲ್ಲಿ, ವೀರ ಮಾರುತಿ ಸೇವಾ ಟ್ರಸ್ಟ್(ರಿ.) ನ ಸಹಕಾರದೊಂದಿಗೆ ನೆರವೇರಿತು.






ಕಾರ್ಯಕ್ರಮದಲ್ಲಿ ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸ್ಮಿತಾ ಬಿ, ಬನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶೀನಪ್ಪ ಕುಲಾಲ್, ಚಿಕ್ಕಮೂಡ್ನೂರು ಪುಳುವಾರು ಗ್ರಾಮದೈವಸ್ಥಾನ ಆಡಳಿತ ಮೊಕ್ತೇಸರು ಸುಭಾಷ್ಚಂದ್ರ ರೈ ಕುಂಬ್ರಗ ಗುತ್ತು, ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ, ಬಾಳ ವಿಕಾಸ ಸಮಿತಿ ಅಧ್ಯಕ್ಷರು ಸ್ವಾತಿ ಗಣೇಶ್, ವೀರ ಮಾರುತಿ ಸೇವಾ ಟ್ರಸ್ಟ್ ನ ಅಧ್ಯಕ್ಷರು ಮನೋಜ್ ದಾರಂದಕುಕ್ಕು ದೀಪ ಬೆಳಗಿಸಿ ಉದ್ಘಾಟಿಸಿದರು.
ಬನ್ನೂರು ಗ್ರಾಮ ಪಂಚಾಯತ್ ಪಿಡಿಒ ಮನ್ಮತ, ವೀರ ಮಾರುತಿ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಚಿಕ್ಕಮೂಡ್ನೂರು, ಉಪಾಧ್ಯಕ್ಷರು ಜಗದೀಶ್ ಬೀರಿಗ, ಹಾಗೂ ತಿಮ್ಮಪ್ಪ ಪುಳುವಾರು, ಕಾರ್ತಿಕ್ ಗೌಡ ಅಂದ್ರಟ್ಟ, ಚಿದಾನಂದ ಬೀರಿಗ, ಯೋಗೀಶ್ ಮೇರ್ಲ, ಜಯನಂದ ಏಕ, ಕೇಶವ ಕೊಲ್ಯ, ಪದ್ಮಚಂದ್ರ ಕೊಲ್ಯ, ದಯಾನಂದಮೇರ್ಲ, ಯತೀಶ್ ಬರ್ತಿಕುಮೇರು, ಶಿವಪ್ರಸಾದ್ ಏಕ, ವಿಶ್ವನಾಥ ಏಕ, ನಾಗೇಶ್ ಏಕ, ಹಾಗೂ ಸ್ಥಳೀಯ ಹಿರಿಯರು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಸ್ಥಳೀಯ ಯುವಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದರು. ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗೆ ಉತ್ತೇಜನ ನೀಡಿದ ಈ ಕ್ರೀಡಾಕೂಟ ಗ್ರಾಮಸ್ಥರಲ್ಲಿ ಚೈತನ್ಯ ತುಂಬುವ ಕೆಲಸ ಮಾಡಿದೆ ಎಂದು ವೀರ ಮಾರುತಿ ಸೇವಾ ಟ್ರಸ್ಟ್ ನ ಆಯೋಜಕರು ತಿಳಿಸಿದ್ದಾರೆ.









