





ಕಡಬ: ಕಡಬ ತಾಲೂಕು ಕೊಣಾಜೆ ಗ್ರಾಮದ ಜಿಲ್ಲಾ ಪಂಚಾಯತಿ ರಸ್ತೆ ಹದಗೆಟ್ಟಿದ್ದು, ಕೊಣಾಜೆ ಬಸ್ ನಿಲ್ದಾಣದಿಂದ ಪಟ್ಲಕ್ಕೆ ಇರುವ ಸಂಪರ್ಕ ರಸ್ತೆಯನ್ನು ಸಾರ್ವಜನಿಕರು ಶ್ರಮದಾನದ ಮೂಲಕ ನ.19ರಂದು ದುರಸ್ತಿಗೊಳಿಸಿದರು.



ಭಾಸ್ಕರದೊಡ್ಡಮನೆ, ಚರಣ್ ದೊಡ್ಡಮನೆ, ನಿತಿನ್ ಮನೆಜಾಲ್, ನವೀನ್ ಮನೆಜಾಲ್, ದುಗ್ಗಣ ಮನೆಜಾಲ್, ದಯಾನಂದ ಕೋಡಿಯಡ್ಕ, ಪ್ರಶಾಂತ್ ಉರೆಸಾಗು, ತಿಮ್ಮಪ್ಪ ಪಟ್ಲ, ಉಮೇಶ್ ಬೋಲೋಲಿ, ದಿನೇಶ್ ದೊಡ್ಡಮನೆ, ಡಿಕಯ್ಯ ಪಾದೆ, ಪ್ರವೀಣ್ ಪೂಜಾರಿ ಸೇರಿದಂತೆ ಹಲವರು ಭಾಗವಹಿಸಿದರು.












