





ಪುತ್ತೂರು: ಗೋಣಿ ಚೀಲದಲ್ಲಿಟ್ಟ ಅಡಿಕೆ ಕಳವಾದ ಘಟನೆ ಶಾಂತಿಗೋಡು ಗ್ರಾಮದ ವೀರಮಂಗಲದಲ್ಲಿ ನಡೆದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಶಾಂತಿಗೋಡು ಗ್ರಾಮದ ವೀರಮಂಗಲ ಅಚ್ಯುತ ಗೌಡ ಎಂಬವರ ಮನೆಯ ಕೊಟ್ಟಿಗೆಯಿಂದ 16 ಗೋಣಿ ಅಡಿಕೆ ಕಳವಾಗಿದೆ. ಅವರು ಒಟ್ಟು 36 ಗೋಣಿ ಚೀಲದಲ್ಲಿ ಒಣಗಿಸಿದ ಅಡಿಕೆಯನ್ನು ಮಾ.25ರಂದು ಮನೆಗೆ ಸೇರಿಕೊಂಡಿರುವ ಕೊಟ್ಟಿಗೆಯ ಅಟ್ಟದಲ್ಲಿ ಇರಿಸಿದ್ದರು. ಬಳಿಕದ ದಿನದಲ್ಲಿ ಅವರ ಮಗಳ ಮದುವೆ ನಿಶ್ಚಿತಾರ್ಥ ಮತ್ತು ನ.7ರಂದು ವಿವಾಹ ನಡೆದ ಬಳಿಕ ನ.12ರಂದು ಕೊಟ್ಟಿಗೆ ಅಟ್ಟದಲ್ಲಿ ನೋಡಿದಾಗ 16 ಗೋಣಿ ಅಡಿಕೆ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಅಡಿಕೆ ಮೌಲ್ಯ ರೂ. 1ಲಕ್ಷ ಆಗಿದ್ದು, ಘಟನೆ ಕುರಿತು ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.










