ಕಲಾ ಪ್ರತಿಭೋತ್ಸವ-ಜಿಲ್ಲಾ ಮಟ್ಟದ ಜನಪದ ಗೀತೆ ಸ್ಪರ್ಧೆ : ಮಾನ್ವಿ ಎಂ.ರೈ ಮೊಡಪ್ಪಾಡಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರು ನ.18 ರಂದು ಮಂಗಳೂರು ಊರ್ವಸ್ಟೋರ್ ತುಳು ಭವನದಲ್ಲಿ ಏರ್ಪಡಿಸಿದ್ದ ಕಲಾ ಪ್ರತಿಭೋತ್ಸವ 2025-26 ಇದರಲ್ಲಿ ಬಾಲ ಪ್ರತಿಭೆ ವಿಭಾಗದಲ್ಲಿ ಜನಪದ ಗೀತೆ ಸ್ಪರ್ಧೆಯಲ್ಲಿ ಮಾನ್ವಿ ಎಂ ರೈಯವರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಏಕತಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 3 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಮೊಡಪ್ಪಾಡಿ ಎಂ. ಲೋಕೇಶ್ ರೈ ಮತ್ತು ಒಳಮೊಗ್ರು ಅನುಗ್ರಹ ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾ ಲೋಕೇಶ್ ರೈರವರ ಪುತ್ರಿಯಾಗಿದ್ದಾರೆ. ಪ್ರಸ್ತುತ ಪುತ್ತೂರು ಗುರುಕುಲ ಕಲಾ ಕೇಂದ್ರ ಬೋಳ್ವಾರ್ ಇಲ್ಲಿ ಗುರುಪ್ರಿಯ ಕಾಮತ್ ಇವರಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here