





ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜ್ಞಾನರಥ/ ಜ್ಞಾನಪಥ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧಾರಿತ ವಿವಿಧ ಸ್ಪರ್ಧೆಗಳು ಕೆ.ಪಿ.ಎಸ್.ಪುಂಜಾಲಕಟ್ಟೆಯಲ್ಲಿ ನ.18ರಂದು ನಡೆಯಿತು.


ಪ್ರೌಢ ಶಾಲಾ ವಿಭಾಗದಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ನಿಲಿಷ್ಕ.ಕೆ (ದಿನೇಶ್ ನಾಯ್ಕ ಕೆ ಜಿ ಹಾಗೂ ಸ್ಮಿತಾ ಶ್ರೀ ಬಿ) ಚಿತ್ರಕಲೆಯಲ್ಲಿ ಪಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.














