





ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಮತ್ತು ಪುತ್ತೂರಿನ ಅಂಬಿಕಾ ವಿದ್ಯಾಲಯ ಜಂಟಿಯಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪುತ್ತೂರಿನ ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವೈಯಕ್ತಿಕ ವಿಭಾಗದಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಸೃಷ್ಟಿ ಎನ್ ವಿ ಪ್ರಸ್ತುತ ಪಡಿಸಿದ “ಅಟೊಮೇಟೆಡ್ ಲೈವ್ ಸ್ಟಾಕ್ ಫೆಸಿಲಿಟಿ, ಕ್ಲೀನಿಂಗ್ ಏಂಡ್ ಫಾಡರ್ ಮ್ಯಾನೇಜ್ಮೆಂಟ್ ಮೆಕ್ಯಾನಿಸಂ ಎಂಬ ವಿಜ್ಞಾನ ಮಾದರಿಯೂ ಪ್ರಥಮ ಬಹುಮಾನವನ್ನು ಪಡೆದಿದ್ದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.


ಗುಂಪು ವಿಭಾಗದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಾದ ಅದ್ವಿಜ್ ಸಜೇಶ್ ಮತ್ತು ಮಿಥುನ್ ಪಿ ಪಿ ಪ್ರದರ್ಶಿಸಿದ ದಿ ಫ್ಯೂಚರ್ ಆಫ್ ಹೋಂ ರೆಹಬಿಲಶನ್; ದ ಅಟೊ ಫಿಸಿಯೋ ಡಿವೈಸ್ ಎಂಬ ವಿಜ್ಞಾನ ಮಾದರಿಯು ದ್ವಿತೀಯ ಬಹುಮಾನವನ್ನು ಪಡೆದಿದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.ಇವರಿಗೆ ಶಾಲಾ ಸಹ ಶಿಕ್ಷಕರಾದ ರೇಖಾಮಣಿ ಮತ್ತು ಶಾರದಾ ಅವರು ಮಾರ್ಗದರ್ಶನ ನೀಡಿರುತ್ತಾರೆ.





ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಆಡಳಿತಾಧಿಕಾರಿಸುಶಾಂತ್ ಹಾರ್ವಿನ್ ಮತ್ತು ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.










